August 24, 2026
Monday, August 24, 2026
spot_img

ವಿದ್ಯಾರ್ಥಿಗಳ ಪರ ನಿಂತ ಕಲಾವಿದರು: ದೆಹಲಿ ಕಾರ್ಯಕ್ರಮ ಮುಂದೂಡಿದ ಸೋನು ನಿಗಮ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ದೇಶಾದ್ಯಂತ ಕ್ರಾಂತಿಯ ಸ್ವರೂಪ ಪಡೆದುಕೊಂಡಿದೆ. ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಯುವಪಡೆ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಹೋರಾಟಕ್ಕೆ ಸಾಂಸ್ಕೃತಿಕ ಹಾಗೂ ಚಿತ್ರರಂಗದ ಪ್ರಮುಖರು ಕೈಜೋಡಿಸುತ್ತಿದ್ದಾರೆ.

ಸೋನು ನಿಗಮ್ ಸಂಗೀತ ಕಾರ್ಯಕ್ರಮ ರದ್ದು

ವಿದ್ಯಾರ್ಥಿಗಳ ಹೋರಾಟದ ತೀವ್ರತೆಯನ್ನು ಪರಿಗಣಿಸಿ, ದೆಹಲಿಯ ಯಶೋಭೂಮಿಯಲ್ಲಿ ಜುಲೈ 25ಕ್ಕೆ ನಿಗದಿಯಾಗಿದ್ದ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮವನ್ನು ಆಗಸ್ಟ್ 15ಕ್ಕೆ ಮುಂದೂಡಲಾಗಿದೆ. “ದೇಶದ ಭವಿಷ್ಯವಾದ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆಯಾಗಿರುವಾಗ ಸಂಭ್ರಮಿಸುವುದು ಸರಿಯಲ್ಲ” ಎಂದು ಗಾಯಕ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ವೈರಲ್ ವೀಡಿಯೋ ಮತ್ತು ನಿರ್ಧಾರ

ಇದಕ್ಕೂ ಮುನ್ನ ಮಾಧ್ಯಮಗಳು ನೀಟ್ ಕುರಿತು ಪ್ರಶ್ನಿಸಿದಾಗ ಸೋನು ನಿಗಮ್ ಕಿರಿಕಿರಿಗೊಂಡು ವಾಗ್ವಾದ ನಡೆಸಿದ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಟೀಕೆಗಳ ಬೆನ್ನಲ್ಲೇ ಅವರು ಕನ್ಸರ್ಟ್ ಮುಂದೂಡುವ ತೀರ್ಮಾನಕ್ಕೆ ಬಂದಿದ್ದಾರೆ.

ಹಾಸ್ಯ ಪ್ರದರ್ಶನ ರದ್ದುಗೊಳಿಸಿದ ಬಸ್ಸಿ

ಅತ್ತ ಪ್ರಸಿದ್ಧ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅನುಭವ್ ಸಿಂಗ್ ಬಸ್ಸಿ ಕೂಡ ಜುಲೈ 25ರ ತಾಲ್ಕಟೋರಾ ಕ್ರೀಡಾಂಗಣದ ತಮ್ಮ ಶೋ ರದ್ದುಪಡಿಸಿದ್ದಾರೆ. ಟಿಕೆಟ್ ಖರೀದಿಸಿದ ಪ್ರೇಕ್ಷಕರಿಗೆ ಪೂರ್ಣ ಹಣ ಮರುಪಾವತಿಸುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !