March 8, 2026
Sunday, March 8, 2026
spot_img

ಅರುಣ್ ತೆಂಡೂಲ್ಕರ್ ಮದುವೆ ಮುಗಿತು ಆದ್ರೆ ಈಗ ಚರ್ಚೆಯಲ್ಲಿರೋದು ಸಾರ ಹಾಕಿರೋ ನೆಕ್ಲೆಸ್! ಯಾಕೆ ಅಂತೀರಾ? ಈ ಸ್ಟೋರಿ ಓದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರುಣ್ ತೆಂಡೂಲ್ಕರ್ ಹಾಗೂ ಸಾನಿಯಾ ಚಾಂಧೋಕ್ ಅವರ ವಿವಾಹ ಸಮಾರಂಭದಲ್ಲಿ ಸಾರಾ ತೆಂಡೂಲ್ಕರ್ ಧರಿಸಿದ್ದ ವಿಶಿಷ್ಟ ಆಭರಣ ಎಲ್ಲರ ಗಮನ ಸೆಳೆದಿದೆ.

ಈ ಸಂದರ್ಭದಲ್ಲಿ ಸಾರಾ ತೆಂಡೂಲ್ಕರ್ ಪ್ರಸಿದ್ಧ ವಿನ್ಯಾಸಕರಾದ ಮನೀಷ್ ಮಲ್ಹೋತ್ರಾ ವಿನ್ಯಾಸದ ಸೀರೆಯನ್ನು ಧರಿಸಿದ್ದು, ಅದಕ್ಕೆ ಹೊಂದಿಕೊಂಡಂತೆ ಹೆರಿಟೇಜ್ ಮೀನಾಕರಿ ನೆಕ್ಲೆಸ್‌ನ್ನು ಧರಿಸಿದ್ದರು. ಜೈಪುರದ ಖ್ಯಾತ ಜ್ವೆಲರಿ ವಿನ್ಯಾಸಕರಾದ ಸುನಿತಾ ಶೇಖಾವತ್ ಅವರ ಸಂಗ್ರಹದಲ್ಲಿರುವ ಈ ವಿಶೇಷ ಆಭರಣವನ್ನು ಕೈಗಾರಿಕ ಕೌಶಲ್ಯದಿಂದ ತಯಾರಿಸಲಾಗಿದೆ.

ಇದನ್ನೂ ಓದಿ:

ಜ್ವೆಲರಿ ತಜ್ಞ ಪ್ರಿಯಾಂಶು ಗೋಯಲ್ ಅವರ ಪ್ರಕಾರ, ಈ ನೆಕ್ಲೆಸ್‌ನಲ್ಲಿ ಕುಂದನ್ ಸೆಟ್ ಪೊಲ್ಕಿಗಳು, ಹೂವಿನ ವಿನ್ಯಾಸಗಳು ಹಾಗೂ ಎಮರಾಲ್ಡ್ ಗಳು ಸೇರಿವೆ. ಮೀನಾಕರಿ ಕಲೆ ಬಳಸಿಕೊಂಡು ತಯಾರಿಸಲಾದ ‘ಕಾರ್ನೇಶನ್ ರಿವರ್ಸಿಬಲ್’ (ಎರಡೂ ಬದಿ ಧರಿಸಬಹುದಾದ) ನೆಕ್ಲೇಸ್ ಅನ್ನು ಸಿದ್ಧಪಡಿಸಲು ಸುಮಾರು 360 ಗಂಟೆಗಳಷ್ಟು ಸಮಯ ಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ನೆಕ್ಲೆಸ್‌ ಬೆಲೆ ಅಂದಾಜು 40 ಲಕ್ಷದಿಂದ 60 ಲಕ್ಷ ರೂಪಾಯಿ ನಡುವೆ ಇರಬಹುದು ಎಂದು ಹೇಳಿದ್ದಾರೆ. ಕೊಲಂಬಿಯನ್ ಎಮರಾಲ್ಡ್ ಮತ್ತು ಸೌತ್ ಸೀ ಪರ್ಲ್ ಗಳನ್ನು ಬಳಸಿ ಜೈಪುರದ ಕರಕುಶಲಕಾರರು ಅದನ್ನು ತಯಾರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !