May 26, 2026
Tuesday, May 26, 2026
spot_img

CINE | 1000 ಕೋಟಿ ರೂ ಕ್ಲಬ್‌ ಸೇರಿದ ‘ಧುರಂಧರ್’ಗೆ ‘ದಂಗಲ್’ ದಾಖಲೆ ಮುರಿಯೋದು ಕಷ್ಟ ಅಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರ್ದೇಶಕ ಆದಿತ್ಯ ಧರ್ ಅವರ ಬಹುನಿರೀಕ್ಷಿತ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಕೇವಲ 12 ದಿನಗಳಲ್ಲಿ ಚಿತ್ರವು ದೇಶೀಯ ಹಾಗೂ ವಿಶ್ವ ಮಟ್ಟದಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಿದ್ದು, ಮತ್ತೆ 1000 ಕೋಟಿ ಕ್ಲಬ್‌ಗೆ ಎಂಟ್ರಿ ಪಡೆದು ಸುದ್ದಿ ಮಾಡಿದೆ.

ವರದಿಗಳ ಪ್ರಕಾರ, ಚಿತ್ರದ 12ನೇ ದಿನದ ಭಾರತೀಯ ನೆಟ್ ಕಲೆಕ್ಷನ್ ಸುಮಾರು 25 ಕೋಟಿ ರೂಪಾಯಿ ಆಗಿದೆ. ಎರಡನೇ ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್ ಕಂಡಿದ್ದ ಚಿತ್ರ, ಎರಡನೇ ಸೋಮವಾರ ಸ್ಪಷ್ಟ ಕುಸಿತ ಕಂಡಿದೆ. ಭಾನುವಾರ 68 ಕೋಟಿ ರೂಪಾಯಿ ಗಳಿಸಿದ್ದ ಸಿನಿಮಾ, ಸೋಮವಾರದಂದು ಅದಕ್ಕಿಂತ ಗಮನಾರ್ಹವಾಗಿ ಕಡಿಮೆ ಮೊತ್ತವನ್ನು ಮಾತ್ರ ಸಂಗ್ರಹಿಸಿದೆ.

ಇದನ್ನೂ ಓದಿ:

ಇದುವರೆಗೆ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಒಟ್ಟು ಗಳಿಕೆ 875.17 ಕೋಟಿ ರೂಪಾಯಿ ತಲುಪಿದೆ. ಗ್ರಾಸ್ ಕಲೆಕ್ಷನ್ ಈಗಾಗಲೇ 1000 ಕೋಟಿ ರೂಪಾಯಿ ಗಡಿ ದಾಟಿದೆ ಎಂದು ವರದಿಗಳು ಸೂಚಿಸುತ್ತಿವೆ. ವಿಶ್ವ ಮಟ್ಟದಲ್ಲಿ ಸಿನಿಮಾ 1392 ಕೋಟಿ ರೂಪಾಯಿ ಗಳಿಕೆ ದಾಖಲಿಸಿದ್ದು, ವಿದೇಶಿ ಮಾರುಕಟ್ಟೆಯಿಂದಲೇ 300 ಕೋಟಿಗೂ ಅಧಿಕ ಆದಾಯ ಬಂದಿದೆ.

ಆದರೆ, ಎರಡನೇ ವಾರದಲ್ಲಿ ಕಲೆಕ್ಷನ್ ವೇಗ ಕುಂಠಿತಗೊಂಡಿರುವುದರಿಂದ 2000 ಕೋಟಿ ಕ್ಲಬ್ ಸೇರುವ ಸಾಧ್ಯತೆ ಪ್ರಶ್ನಾರ್ಥಕವಾಗಿದೆ. ದಂಗಲ್ ಚಿತ್ರದ 2000 ಕೋಟಿ ದಾಖಲೆಯನ್ನು ಮುರಿಯಬಹುದೇ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ. ಈಗ ಮುಂದಿನ ವಾರದ ಗಳಿಕೆ ಚಿತ್ರದ ಭವಿಷ್ಯವನ್ನು ನಿರ್ಧರಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !