ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಶುಕ್ರವಾರ ವಾಟ್ಸಾಪ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇಡಿ ಬಂಧನದಲ್ಲಿರುವ ತನ್ನ ಪತಿಯನ್ನು ಬೆಂಬಲಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ.
ಡಿಜಿಟಲ್ ಮೀಡಿಯಾ ಬ್ರೀಫಿಂಗ್‌ನಲ್ಲಿ, ಸುನೀತಾ ಕೇಜ್ರಿವಾಲ್ ಅವರು ತಮ್ಮ ಪತಿ ದೇಶದ ‘ಅತ್ಯಂತ ಭ್ರಷ್ಟ ಮತ್ತು ಸರ್ವಾಧಿಕಾರಿ ಶಕ್ತಿಗಳಿಗೆ’ ಸವಾಲು ಹಾಕಿದ್ದಾರೆ. ಜನರು ತಮ್ಮ ಆಶೀರ್ವಾದ ಮತ್ತು ಪ್ರಾರ್ಥನೆಯ ಮೂಲಕ ಅವರನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ.
ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರಿಗೆ ಜನರು ತಮ್ಮ ಆಶೀರ್ವಾದ, ಪ್ರಾರ್ಥನೆ ಅಥವಾ ಇತರ ಯಾವುದೇ ಸಂದೇಶಗಳನ್ನು ಕಳುಹಿಸಬಹುದು. ಅದನ್ನು ಅವರಿಗೆ ತಿಳಿಸುವುದಾಗಿ ಅವರು ವಾಟ್ಸಾಪ್ ಸಂಖ್ಯೆ – 8297324624 ಅನ್ನು ನೀಡಿದ್ದಾರೆ.
ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಗುರುವಾರ ನ್ಯಾಯಾಲಯವು ಅವರ ಇಡಿ ಕಸ್ಟಡಿಯನ್ನು ಏಪ್ರಿಲ್ 1 ರವರೆಗೆ ವಿಸ್ತರಿಸಿದೆ.