ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಸ್ಟಾರ್ ಜೋಡಿ ನಟ ಆರ್ಯ ಮತ್ತು ಸಯೇಶಾ ವೈವಾಹಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮೊದಲ ಬಾರಿಗೆ ಮುದ್ದು ಮಗಳನ್ನು ನಟಿ ಸಯೇಶಾ ಪರಿಚಯಿಸಿದ್ದಾರೆ.
ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಆರ್ಯ ಮತ್ತು ಸಯೇಶಾ ಬೆಳ್ಳಿಪರದೆಯಲ್ಲೂ ಜೊತೆಯಾಗಿ ಮಿಂಚಿದ್ದಾರೆ. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಪ್ರೀತಿಸಿ, 2019ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನೂ ಮುದ್ದು ಮಗಳ ಆಗಮನವಾಗಿ ಒಂದೂವರೆ ವರ್ಷದ ನಂತರ ಈಗ ಮಗಳ ಫೋಟೋವನ್ನು ಯುವರತ್ನ ನಟಿ ಸಯೇಶಾ ರಿವೀಲ್ ಮಾಡಿದ್ದಾರೆ.
ಸಯೇಶಾ ಕಳೆದ ವರ್ಷ 2021ರ ಜುಲೈನಲ್ಲಿ ಹೆಣ್ಣು ಮಗುವಿಗೆ ತಾಯಿಯಾಗಿದ್ದರು. ಆದರೆ ಎಲ್ಲಿಯೂ ಕೂಡ ಮಗಳ ಮುಖ ಪರಿಚಯ ಮಾಡಿಸಿರಲಿಲ್ಲ. ಇದೀಗ ಪತಿ ಆರ್ಯ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮಗಳ ಫೋಟೋ ರಿವೀಲ್ ಮಾಡಿದ್ದಾರೆ.ಮುದ್ದು ಮಗಳಿಗೆ ಅರಿಯಾನಾ ಎಂದು ಹೆಸರಿಟ್ಟಿದ್ದಾರೆ.