ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುದ್ಧ ಎಲ್ಲೇ ಆದ್ರೂ ಸಾಮಾನ್ಯ ಜನರಿಗೆ ಏನಾದ್ರು ಒಂದು ಎಫೆಕ್ಟ್ ಆಗೇ ಆಗುತ್ತದೆ. ಇದೀಗ ಇಸ್ರೇಲ್- ಇರಾನ್ ನಡುವಿನ ಯುದ್ಧದಿಂದಾಗಿ ಭಾರತದಲ್ಲಿ ಗೃಹ ಬಳಕೆಯ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಾಗಿದೆ. ಇದರಿಂದಾಗಿ ಸಾಮಾನ್ಯವಾಗಿಯೇ ಹೊಟೇಲ್‌ನ ಊಟ ತಿಂಡಿ ದರವೂ ಹೆಚ್ಚಾಗಿದೆ.
ಸಿಲಿಂಡರ್ ಅಭಾವ ಆಗಬಹುದು, ಇನ್ನೂ ಏನೇನೋ ಸಮಸ್ಯೆ ಆಗಬಹುದು ಈ ಕಾರಣಗಳಿಂದ ಹೊಟೇಲ್‌ನಲ್ಲಿ ಊಟ ತಿಂಡಿ ಕಾಫಿ ಪ್ರತಿಯೊಂದರ ದರವೂ ಹೆಚ್ಚಾಗಿದೆ.
ಇದರ ಜತೆ ದೇಶದ 95% ಹೋಟೆಲ್‌ಗಳು ಅಡುಗೆ ಅನಿಲ ಸಿಲಿಂಡರ್‌ಗಳನ್ನೇ ಅವಲಂಬಿಸಿವೆ. ಸಿಲಿಂಡರ್ ಸಿಗದಿದ್ದರೆ ಹೋಟೆಲ್‌ಗಳನ್ನು ನಡೆಸಲು ಸಾಧ್ಯವಿಲ್ಲ. ಹೀಗಾಗಿ ಕಾರ್ಮಿಕರು ಕೆಲಸ ಕಳೆದುಕೊಳ್ಳಬಹುದು. ಹೊಟೇಲ್ ಮುಚ್ಚುವ ಸಂದರ್ಭವೂ ಎದುರಾಗಬಹುದು ಎನ್ನಲಾಗಿದೆ.



