ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಡೆಂಗ್ಯೂ ಉಲ್ಬಣವಾಗಿದ್ದು, ಪ್ಲೇಟ್ಲೆಟ್ಸ್ಗಳನ್ನು ಹೆಚ್ಚಿಸುವ ಪಪಾಯ ಹಾಗೂ ಕಿವಿ ಹಣ್ಣಿಗೆ ಭಾರೀ ಬೇಡಿಕೆ ಬಂದಿದೆ.
ಡೆಂಗ್ಯೂ ರೋಗಲಕ್ಷಣಗಳನ್ನು ಎದುರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ನಿರ್ಮಿಸುವ ಪೋಷಕಾಂಶಗಳು ಪಪ್ಪಾಯಿಗಳು ಮತ್ತು ಕಿವಿ ಫ್ರೂಟ್ನಲ್ಲಿದೆ ಎನ್ನಲಾಗಿದ್ದು, ಪಪಾಯ ಎಲೆಗಳ ಜ್ಯೂಸ್ಗಳನ್ನು ಸೇವಿಸಲಾಗುತ್ತದೆ. ಹೆಚ್ಚಿನ ಬೇಡಿಕೆ ಇರುವ ಕಾರಣ ಇದರ ಬೆಲೆಯೂ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ.
ಮಾರ್ಕೆಟ್ನಲ್ಲಿ ಕಿವಿ ಹಣ್ಣು ಕೆಜಿಗೆ ₹ 140 ರಿಂದ ₹ 300 ರವರೆಗೆ ಮಾರಾಟವಾಗುತ್ತಿದ್ದರೆ, ಪಪ್ಪಾಯಿ ಕೆಜಿಗೆ ₹ 33 ರಿಂದ ₹ 50 ರವರೆಗೆ ಮಾರಾಟವಾಗುತ್ತಿದೆ. ಡೆಂಗ್ಯೂ ಪ್ರಕರಣಗಳ ಹೆಚ್ಚಳದ ನಂತರ ಕಿವೀಸ್ ಬೆಲೆ ಪ್ರತಿ ಕಿಲೋಗ್ರಾಂಗೆ ₹ 240 ರಿಂದ ₹ 280ಕ್ಕೆ ಏರಿದೆ ಮತ್ತು ಪಪ್ಪಾಯಿ ಬೆಲೆ ₹ 5 ಹೆಚ್ಚಾಗಿದೆ. ಕಿಲೋಗೆ ₹40ಕ್ಕೆ ಬದಲಾಗಿ ₹45ಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.