ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಫ್ಯಾನ್ಸ್ ಗಾಲ ನಡುವೆ ಗೊಂದಲಗಳು ಹುಟ್ಟೋದು ಸರ್ವೇ ಸಾಮಾನ್ಯ. ಆದ್ರೆ ಈಗ ಭಾರತ ತಂಡದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೊಟ್ಟ ಒಂದು ಹೇಳಿಕೆಯಿಂದ ಎರಡು ತಂಡದ ಅಭಿಮಾನಿಗಳಲ್ಲಿ ಬೆಂಕಿ ಹತ್ತಿಕೊಂಡಿದೆ.
ಖಾಸಗಿ ಸಂದರ್ಶನವೊಂದರಲ್ಲಿ ಹರ್ಭಜನ್ ಸಿಂಗ್ “ಕ್ರಿಕೆಟ್‌ನಲ್ಲಿ ಧೋನಿ ಅಭಿಮಾನಿಗಳೇ ನಿಜವಾದ ಅಭಿಮಾನಿಗಳು, ಉಳಿದ ಎಲ್ಲಾ ಪೇಡ್ (Paid) ಫ್ಯಾನ್ಸ್” ಎಂಬ ಹೇಳಿಕೆ ನೀಡಿದ್ದು,ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಹೇಳಿಕೆಯು ವಿಶೇಷವಾಗಿ ವಿರಾಟ್ ಕೊಹ್ಲಿ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ.
ಈ ಹೇಳಿಕೆಗೆ ವಿರಾಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಹರ್ಭಜನ್ ಸಿಂಗ್ ಅವರಿಗೆ ಧೋನಿ ಮೇಲಿರುವ ಅಭಿಮಾನ ಅರ್ಥವಾಗುತ್ತೆ, ಆದರೆ ಅದಕ್ಕಾಗಿ ಇತರ ಆಟಗಾರರ ಅಭಿಮಾನಿಗಳನ್ನು ನಿಂದಿಸುವುದು ಸರಿಯಲ್ಲ ಎಂದು ಹಲವಾರು ಟ್ವೀಟ್ ಮಾಡಿದ್ದಾರೆ.