ನಾನು ಬದುಕಿರೋವರೆಗೂ ಭಾಯ್ ನ ಮುಟ್ಟೋಕೂ ಆಗಲ್ಲ: ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಸವಾಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎನ್ ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಬಳಿಕ ಬಾಲಿವುಟ್ ನಟ ಸಲ್ಮಾನ್ ಖಾನ್ ಸುರಕ್ಷತೆ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಇತ್ತ ಖಾನ್ ಬಾಡಿಗಾರ್ಡ್ ಶೇರಾ, ‘ನಾನು ಬದುಕಿರೋವರೆಗೂ ಭಾಯ್ ನ ಮುಟ್ಟೋಕೂ ಆಗಲ್ಲ’ ಎಂದು ಸವಾಲೆಸೆದಿದ್ದಾರೆ.

ಕೃಷ್ಣಮೃಗ ಬೇಟೆ ಪ್ರಕರಣದ ಬಳಿಕ ಬಿಷ್ಣೋಯ್ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಸತತ ಯತ್ನ ನಡೆಸಿದ್ದು, ಇದರ ನಡುವೆಯೇ ಸಲ್ಮಾನ್ ಖಾನ್ ಗೆ ತೀರ ಹತ್ತಿರವಾಗಿದ್ದ ಎನ್ ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಹತ್ಯೆ ಮಾಡಿಸುವ ಮೂಲಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ಗೆ ಪರೋಕ್ಷ ಎಚ್ಚರಿಕೆ ನೀಡಿದೆ.

ಇದರ ನಡುವೆಯೇ ನಟ ಸಲ್ಮಾನ್ ಖಾನ್ ಭದ್ರತೆ ಹೆಚ್ಚಳ ಮಾಡಲಾಗಿದ್ದು, ಹತ್ತಾರು ಅಂಗರಕ್ಷಕರನ್ನು ಸಲ್ಮಾನ್ ಖಾನ್ ರಕ್ಷಣೆಗೆ ನಿಯೋಜಿಸಲಾಗಿದೆ.

ಇನ್ನು ನಟ ಸಲ್ಮಾನ್ ಖಾನ್ ಬಾಡಿಗಾರ್ಡ್ ಗಳಲ್ಲಿ ಪ್ರಮುಖರಾಗಿರುವ ಶೇರಾ, ತಾವು ಬದುಕಿರುವವರೆಗೂ ಸಲ್ಮಾನ್ ಖಾನ್ ಗೆ ಏನೂ ಆಗಲು ಬಿಡುವುದಿಲ್ಲ ಎಂದು ಶಪಥ ಗೈದಿದ್ದಾರೆ. ಎಂತಹುದೇ ಪರಿಸ್ಥಿತಿ ಬಂದರೂ ನಾನು ಬದುಕಿರುವವರೆಗೂ ಸಲ್ಮಾನ್ ಭಾಯ್ ನ ಮುಟ್ಟೋಕೂ ಬಿಡಲ್ಲ ಎಂದು ಹೇಳಿದ್ದಾರೆ.

‘ಸಲ್ಮಾನ್ ಭಾಯ್ ರಕ್ಷಣೆ ವಿಚಾರದಲ್ಲಿ ನಮಗೆ ಅವರ ಅಭಿಮಾನಿಗಳದ್ದೇ ದೊಡ್ಡ ಸವಾಲು..ಅವರ ಅಭಿಮಾನಿಗಳ ಗುಂಪನ್ನು ನಿರ್ವಹಿಸುವುದು ಸಾಹಸವೇ ಸರಿ. ನಾವು ಸಲ್ಮಾನ್ ಭಾಯಿಯನ್ನು ರಕ್ಷಿಸುತ್ತೇವೆ ಮತ್ತು ಸ್ಥಳೀಯ ಭದ್ರತಾ ಸಿಬ್ಬಂದಿಗಳು ಗುಂಪನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ರಕ್ಷಣೆಯಲ್ಲಿರುವಾಗ, ಸರಿಯಾದ ಕ್ಷಣದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಶೇರಾ ಹೇಳಿದ್ದಾರೆ.

ಅಲ್ಲದೆ ತಮ್ಮ ಮತ್ತು ಸಲ್ಮಾನ್ ಖಾನ್ ಸಂಬಂಧವನ್ನು ಬಣ್ಣಿಸಿರುವ ಶೇರಾ, ‘ನಮ್ಮದು ಬಾಡಿಗಾರ್ಡ್ ಮತ್ತು ಮಾಲೀಕನ ಸಂಬಂಧ ಮಾತ್ರವಲ್ಲ. ತಮ್ಮದು ಸ್ನೇಹವನ್ನೂ ಮೀರಿದ್ದಾಗಿದೆ. ನಮ್ಮ ಜೋಡಿ ಅನನ್ಯವಾಗಿದ್ದು, ಸಲ್ಮಾನ್ ಖಾನ್ ಅವರು ಪಠಾಣ್, ನಾನು ಸರ್ದಾರ್. ನಾವಿಬ್ಬರೂ ಒಟ್ಟಿಗೆ ಇದ್ದರೇ ಅಜೇಯರಾಗಿರುತ್ತೇವೆ. ನನ್ನ ಕೊನೆಯ ಉಸಿರು ಇರುವವರೆಗೂ ನಾನು ಭಾಯ್ ಗಾಗಿ ಸೇವೆ ಮಾಡುತ್ತೇನೆ. ನಾನು 29 ವರ್ಷಗಳಿಂದ ಸಲ್ಮಾನ್‌ ಖಾನ್ ರೊಂದಿಗೆ ಇದ್ದೇನೆ. ಅನೇಕ ಅಂಗರಕ್ಷಕರು ಬಂದು ಹೋಗಿದ್ದಾರೆ. ಬೇರೆ ಸ್ಟಾರ್ ನಟರೊಂದಿಗೆ ಕೆಲಸ ಮಾಡುತ್ತಿದ್ದಾರೆ. ನಾನು ಮಾತ್ರ ಸಲ್ಮಾನ್ ಭಾಯ್ ರನ್ನು ಬಿಟ್ಟು ಹೋಗಿಲ್ಲ. ಏಕೆಂದರೆ ನನ್ನಂತೆ ಬೇರೆ ಯಾರೂ ಅವರನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಶೇರಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!