ಹೊಸದಿಗಂತ ಶಿಗ್ಗಾಂವಿ:
ಸಿದ್ದರಾಮಯ್ಯ ಇರುವವರೆಗೆ ದಲಿತ ಸಿಎಂ ವಿಚಾರ ಇಲ್ಲ ಇದರ ಬಗ್ಗೆ ಯಾವುದೇ ನಿರ್ಧಾರ ಆಗಲ್ಲ. ಸಮಯ ಬಂದಾಗ ಅದಕ್ಕೆ ಮಹತ್ವ ಇರುತ್ತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಶಿಗ್ಗಾಂವಿಯಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಈಗ ದಲಿತ ಸಿಎಂ ವಿಷಯ ಹೈಪ್ ಮಾಡೋದ್ರಲ್ಲಿ ಅರ್ಥ ಇಲ್ಲ ಎಂದರು.
ಸಚಿವ ಸತೀಶ್ ಜಾರಕಿಹೊಳಿ ದೆಹಲಿ ಭೇಟಿ ವಿಚಾರಕ್ಕೆ ಮಾತನಾಡಿ, ನಮ್ಮಲ್ಲಿ ಕೆಲವರಿಗೆ ದೆಹಲಿಗೆ ಹೋಗೋ ಚಟ ಇದೆ, ಕೆಲವರು ಬಹಳ ಸಾಂಧರ್ಭಿಕವಾಗಿ ಹೋಗ್ತಿರ್ತಾರೆ ಎಂದು ಸ್ಪಷ್ಟಪಡಿಸಿದರು.
ಮೂಡಾ ಸೈಟ್ ವಿಚಾರವಾಗಿ ಜಿಟಿಡಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಗೆ ಹೆಚ್ ಡಿ ಕೆ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಗೆ ಬೇವಿನಕಾಯಿ ಯಾವುದು ಹಾಗಲಕಾಯಿ ಯಾವುದು ಅನ್ನೋದು ಇಷ್ಟು ತಡ ಆಗಿ ಯಾಕೆ ಗೊತ್ತಾಯಿತು? ಎಂದು ಕೇಂದ್ರ ಸಚಿವ ಕುಮಾರಸ್ವಾಮಿಗೆ ಟಾಂಗ್ ನೀಡಿದರು.