ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಿನ ಕಾಲದ ಮಕ್ಕಳನ್ನು ಬೆಳೆಸುವುದೇ ಸವಾಲಾಗಿ ಪರಿಣಮಿಸಿದೆ, ತಮಗೆ ಬೇಕಿರುವುದು ಸಿಗದೇ ಹೋದರೆ ಸುಲಭವಾಗಿ ಮಕ್ಕಳು ಆತ್ಮಹತ್ಯೆ ದಾರಿಯನ್ನು ಆರಿಸುತ್ತಿದ್ದಾರೆ. ಇಂಥದ್ದೇ ಒಂದು ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ಪ್ರಸಿದ್ಧ ಪ್ರವಾಸಿತಾಣವಾದ ಭೇದಘಾಟ್‌ಗೆ ಕರೆದೊಯ್ಯಲು ತಾಯಿ ನಿರಾಕರಿಸಿದ್ದಕ್ಕೆ 10 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಐದನೇ ತರಗತಿ ವಿದ್ಯಾರ್ಥಿನಿಯಾಗಿರುವ ಬಾಲಕಿ ತನ್ನ ತಾಯಿಯನ್ನು 10 ಕಿಮೀ ದೂರದಲ್ಲಿರುವ ಭೇದಘಾಟ್‌ಗೆ ಕರೆದುಕೊಂಡು ಹೋಗುವಂತೆ ಪೀಡಿಸುತ್ತಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಯಿ ನಿರಾಕರಿಸಿದಾಗ ಬಾಲಕಿ ಮೆಟ್ಟಿಲು ಹತ್ತಿ ಡೋರ್ ಕರ್ಟನ್ ಗೆ ನೇಣು ಬಿಗಿದುಕೊಂಡಿದ್ದಾಳೆ ಎಂದು ದನ್ವಂತ್ರಿ ನಗರ ಠಾಣೆಯ ಇನ್ಸ್ ಪೆಕ್ಟರ್ ವಿನೋದ್ ಪಾಠಕ್ ತಿಳಿಸಿದ್ದಾರೆ.