ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಳೆಯೂ ಹಿಂದೆ ಹೋಯಿತು, ಕೆ.ಆರ್.ಎಸ್. ಖಾಲಿಯಾಗಿ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತಿದೆ ಎಂದು ಮಾಜಿ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ತಲೆಯಲ್ಲಿ ಈ ಬಾರಿ ಗೆಲ್ಲುವ ನಂಬಿಕೆ ಇರಲಿಲ್ಲ. ಗೆಲ್ಲುತ್ತೇವೆ ಅಂತಾ ಗೊತ್ತಿದ್ದಿದ್ರೆ ಗ್ಯಾರಂಟಿ ಘೋಷಣೆಯನ್ನೇ ಮಾಡುತ್ತಿರಲಿಲ್ಲ. ಅತಂತ್ರ ಬಂದ್ರೆ ಜೆಡಿಎಸ್ ಜೊತೆ ಸರ್ಕಾರ ಮಾಡೋಣ ಅಂದುಕೊಂಡಿದ್ದರು. ಆದರೆ ಜೆಡಿಎಸ್ ಗೆ ಬರುವ ಮತ ಕಾಂಗ್ರೆಸ್ ಗೆ ಶಿಫ್ಟ್ ಆಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ನಾವೇನು ಪುಕ್ಸಟ್ಟೆ ಅಕ್ಕಿ ಕೇಳಿಲ್ಲ, ದುಡ್ಡು ಕೊಡ್ತೀವಿ ಅಂತಾರಲ್ಲ. ಹಾಗಾದ್ರೆ ಖರೀದಿ ಮಾಡಿ ಅಕ್ಕಿ ಕೊಡಿ. ಅಕ್ಕಿ ಕೊಡಲು ಆಗಲ್ಲ ಅಂದ್ರೆ ಆ ದುಡ್ಡನ್ನು ಜನರಿಗೆ ಕೊಡಿ ಎಂದು ಟಾಂಗ್ ನೀಡಿದರು.