ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಲ ಝಳ ಜೋರಾಗಿಯೇ ಇದೆ. ಮಾನವನ ದೇಹಕ್ಕೆ ನೀರಿನಂಶ ಅಧಿಕವಾಗಿ ಬೇಕು. ಅನೇಕರಿಗೆ ನೀರು ಕುಡಿಯುವುದ ಕಷ್ಟದ ಕೆಲಸ. ಹಾಗಾಗಿ ದೇಹಾರೋಗ್ಯಕ್ಕೆ ಅನುಕೂಲವಾಗುವ ವಿಧ ವಿಧದ ಪಾನೀಯಗಳನ್ನು ನಾವು ಪರಿಚಯಿಸುತ್ತಿದ್ದೇವೆ.
ದೇಹ ತಂಪಾಗಿಡಲು ಈ ಜ್ಯೂಸ್‌ಕುಡಿಯಿರಿ!
ಬೂದು ಕುಂಬಳ ಯಾರಿಗೆ ತಾನೇ ಗೊತ್ತಿಲ್ಲ. ಹೌದು ಈ ಬೂದು ಕುಂಬಳದ ಜ್ಯೂಸ್‌ಆರೋಗ್ಯಕ್ಕೆ ಉತ್ತಮ. ಒಂದು ಸಾಮಾನ್ಯ ಗಾತ್ರದ ಬೂದು ಕುಂಬಳವನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. ಒಳಭಾಗದಲ್ಲಿರುವ ಬೀಜಗಳನ್ನು ಬೇರ್ಪಡಿಸಿ. ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಸೋಸಿ ಗಾಜಿನ ಲೋಟಕ್ಕೆ ಹಾಕಿ, ಚಿಟಿಕೆ ಉಪ್ಪು ಸೇರಿಸಿ. ಬೂದುಕುಂಬಳ ಜ್ಯೂಸ್‌ಕುಡಿಯಲು ರೆಡಿ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆ ಉರಿ ಕಡಿಮೆಯಾಗುತ್ತದೆ, ಅತಿಯಾದ ಬೊಜ್ಜಿರುವವರು ಸೇವಿಸಿದರೆ ಬೊಜ್ಜು ಸಮಸ್ಯೆ ನಿವಾರಣೆಯಾಗುತ್ತದೆ.
ಸೋರೆಕಾಯಿ ಜ್ಯೂಸ್‌ಇದೇ ರೀತಿಯಾಗಿ ತಯಾರಿಸಬಹುದು. ಸೋರೆಕಾಯಿ ಜ್ಯೂಸ್‌ಕುಡಿದರೆ ರಕ್ತದೊತ್ತಡ ಕಡಿಮೆಯಾಗುವುದಲ್ಲದೆ, ದೇಹಕ್ಕೆ ತಂಪು ನೀಡುತ್ತದೆ. ನೀವೊಮ್ಮೆ ಟ್ರೈ ಮಾಡಿ.