ಅಶೋಕ್ ಹೆಸರಿನ ನಾಮಫಲಕ ಇರೋವರೆಗೂ ಆ ಕೊಠಡಿಗೆ ಕಾಲಿಡೋದಿಲ್ಲ: ಎಸ್.ಆರ್. ವಿಶ್ವನಾಥ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತು ಶಾಸಕ ಎಸ್‌ಆರ್ ವಿಶ್ವನಾಥ್ ಮಧ್ಯೆ ಅಸಮಾಧಾನ ಮತ್ತೊಮ್ಮೆ ಸಿಡಿದೆದ್ದಿದೆ.

ಸದನದಲ್ಲಿ ಮುಂದಿನ ಕಾರ್ಯತಂತ್ರಗಳನ್ನು ಮಾತನಾಡಲು ಆರ್ ಅಶೋಕ್ ಕಚೇರಿಗೆ ತೆರಳಲು ವಿಶ್ವನಾಥ್ ನಿರಾಕರಿಸಿದ್ದಾರೆ. ಅಶೋಕ್ ಹೆಸರಿನ ನಾಮಫಲಕ ಇರೋವರೆಗೂ ನಾನು ಆ ಕೊಠಡಿಗೆ ಕಾಲಿಡೋದಿಲ್ಲ. ನಾಮಫಲಕ ತೆಗೀರಿ ಬರ‍್ತೀನಿ ಎಂದು ಪಟ್ಟು ಹಿಡಿದು ಹೊರಗೆ ಕುಳಿತಿದ್ದಾರೆ.

ಇದೀಗ ಬಿ.ವೈ ವಿಜಯೇಂದ್ರ ಅವರ ಜೊತೆ ವಿಶ್ವನಾಥ್ ಮಾತನಾಡಿದ್ದು, ಅಶೋಕ್ ಮಾತಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಎಲ್ಲರೂ ಒಗ್ಗಟ್ಟಿನಲ್ಲಿ ಇರಬೇಕು ಎಂದು ವಿಶ್ವನಾಥ್ ಮನವೊಲಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!