ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಎಸ್‌ಆರ್‌ಟಿಸಿಯ 100 ಹೊಸ ಅಶ್ವಮೇಧ ಬಸ್‌ಗಳನ್ನು ರಸ್ತೆಗೆ ಇಳಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಈ ಬಸ್‌ಗಳಿಗೆ ಅಶ್ವಮೇಧ ಕ್ಲಾಸಿಕ್ ಎಂದು ಹೆಸರಿಡಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಜೊತೆಯಲ್ಲಿ ಬಸ್‌ಗಳಿಗೆ ಹಸಿರು ನಿಶಾನೆ ತೋರಿದ್ದಾರೆ.
ಪ್ರಯಾಣದ ಮರು ಕಲ್ಪನೆ ಎನ್ನುವ ಘೋಷವಾಕ್ಯದೊಂದಿಗೆ ನೂತನ ಬಸ್ ಸಂಚರಿಸಲಿದ್ದು, ಒಟ್ಟಾರೆ ಮುಂದಿನ ದಿನಗಳಲ್ಲಿ 800 ಕ್ಕೂ ಹೆಚ್ಚು ಅಶ್ವಮೇಧ ಕ್ಲಾಸಿಕ್ ರಸ್ತೆಯಲ್ಲಿ ಓಡಾಡಲಿದೆ.
ಅಶ್ವಮೇಧ ಯಾಕೆ ಸ್ಪೆಶಲ್?
- ಇದರಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪ್ಯಾನಿಕ್ ಬಟನ್, ಜಿಪಿಎಸ್ ಹಾಗೂ ಎರಡು ರೇರ್ ಕ್ಯಾಮೆರಾಗಳಿವೆ. ಮಹಿಳೆಯರಿಗೆ ಈ ಬಸ್‌ಗಳಲ್ಲಿಯೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.
- ಮೊಬೈಲ್ ಚಾರ್ಜಿಂಗ್ ಪಾಯಿಂಟ್, 52 ವಿಶಾಲವಾದ ಬಕೆಟ್ ಟೈಪ್ ಆಸನ, ಎಲ್‌ಇಡಿ ಫಲಕ
- ನೂತನ ವಿನ್ಯಾಸದ ಲಗೇಜ್ ಕ್ಯಾರಿಯರ‍್ಸ್, ವಿಶಾಲವಾದ ಕಿಟಕಿ, ಟಿಂಟೆಡ್ ಗಾಜುಗಳು