ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಕುತೂಹಲ ಕೆರಳಿಸಿರುವ ಕಾಶಿ ವಿಶ್ವನಾಥ ದೇಗುಲ ಪಕ್ಕದ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಆರಂಭಗೊಂಡಿರುವ ವೈಜ್ಞಾನಿಕ ಸಮೀಕ್ಷೆ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಪ್ರಥಮ ಹಂತದ ಸಮೀಕ್ಷೆ ಪೂರ್ಣಗೊಳಿಸಿರುವ ಭಾರತೀಯ ಪುರಾತತ್ವ ಇಲಾಖೆ, ಇಂದು ದ್ವಿತೀಯ ಹಂತದ ಸಮೀಕ್ಷೆ ಕೈಗೆತ್ತಿಕೊಂಡಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಭಾರೀ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ದ್ವಿತೀಯ ಹಂತದಲ್ಲಿ ರಾಡರ್ ಗಳ ಮೂಲಕ ಸಮೀಕ್ಷೆ ಕೈಗೆತ್ತಿಕೊಳ್ಳಲಾಗುತ್ತಿದೆ. ಸಮೀಕ್ಷೆಯ ವರದಿ ಬಗ್ಗೆ ನಾವು ಕುತೂಹಲದಲ್ಲಿದ್ದೇವೆ ಎಂದು ಪ್ರರಣದಲ್ಲಿ ಹಿಂದು ಪರ ವಾದ ಮಂಡಿಸಿರುವ ವಕೀಲ ಸುಭಾಷ್ ನಂದನ್ ಚತುರ್ವೇದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಈ ಮಸೀದಿ ಸಂಕೀರ್ಣ ಹಿಂದು ದೇವಾಲಯವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಕಂಡುಕೊಳ್ಳಲು ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಇದೀಗ ನ್ಯಾಯಾಲಯದ ಸೂಚನೆಯಂತೆ ಶುಕ್ರವಾರ ಪುರಾತತ್ವ ಇಲಾಖೆ ಈ ಸಮೀಕ್ಷೆ ಆರಂಭಗೊಂಡಿದೆ.