ಏಷ್ಯಾ​ಕಪ್‌ ಹಾಕಿ ಟೂರ್ನಿ: ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತ ಕಿರಿಯ ಮಹಿಳಾ ತಂಡ!

ಹೊಸದಿಂಗತ ಡಿಜಿಟಲ್‌ ಡೆಸ್ಕ್:‌

ಜ​ಪಾ​ನ್‌​ ನಡೆದ ಕಿರಿಯ ಮಹಿ​ಳೆ​ಯರ ಏಷ್ಯಾ​ಕಪ್‌ ಹಾಕಿ ಟೂರ್ನಿ​ಯಲ್ಲಿ(Hockey Asia Cup) ಭಾರತ ತಂಡ ಕೊರಿಯಾವನ್ನು ಮಣಿಸುವ ಮೂಲಕ ಚಿನ್ನದ ಪದಕ ಜಯಿಸಿದೆ.

ಈ ಮೂಲಕ 2ನೇ ಪ್ರಯತ್ನದಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತು.

ಪ್ರಶಸ್ತಿ ಸುತ್ತಿನ ಕಾಳಗದಲ್ಲಿ ಭಾರತದ ಕಿರಿಯ ಮಹಿಳೆಯರ ತಂಡ ಅಮೋಘ ಪ್ರದರ್ಶನ ತೋರುವ ಮೂಲಕ ಕೊರಿಯಾ ತಂಡವನ್ನು 2-1 ಗೋಲ್​ಗಳ ಅಂತರದಿಂದ ಬಗ್ಗು ಬಡಿದಿದೆ.

ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಆತಿ​ಥೇಯ ಜಪಾನ್‌ ವಿರುದ್ಧ 1-0 ಗೋಲಿನ ಅಂತರದಿಂದ ರೋಚಕ ಗೆಲು​ವು ಸಾಧಿಸಿತ್ತು. ಜತೆಗೆ ​ವರ್ಷಾಂತ್ಯ​ದಲ್ಲಿ ಚಿಲಿ​ಯಲ್ಲಿ ನಡೆ​ಯ​ಲಿ​ರುವ ಎಫ್‌​ಐ​ಎಚ್‌ ಕಿರಿಯರ ಮಹಿಳಾ ವಿಶ್ವ​ಕ​ಪ್‌ಗೂ ಅರ್ಹತೆ ಗಿಟ್ಟಿ​ಸಿ​ಕೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!