Friday, November 21, 2025

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಸೆಮಿಫೈನಲ್ | ಸೂಪರ್ ಓವರ್ ನಲ್ಲಿ ಭಾರತಕ್ಕೆ ಸೋಲಿನ ಕಹಿ: ಫೈನಲ್ ಗೆ ಎಂಟ್ರಿಕೊಟ್ಟ ಬಾಂಗ್ಲಾ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2025ನೇ ಸಾಲಿನ ಟ್ವೆಂಟಿ-20 ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಸೆಮಿಫೈನಲ್ ಪಂದ್ಯ ರೋಚಕ ಟೈ ಆಗಿತ್ತು. ಬಳಿಕ ನಡೆದ ಸೂಪರ್ ಓವರ್ ನಲ್ಲಿ ಬಾಂಗ್ಲಾದೇಶ ಗೆದ್ದು ಫೈನಲ್ ಗೆ ಲಗ್ಗೆ ಇಟ್ಟಿದ್ದು, ಭಾರತ ಟೂರ್ನಿಯಿಂದಲೇ ನಿರ್ಗಮಿಸಿದೆ .

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಆರು ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ್ದ ಭಾರತ ಎ ತಂಡ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 194 ರನ್ ಗಳಿಸುವುದರೊಂದಿಗೆ ಪಂದ್ಯ ಟೈ ಆಯಿತು.

ಭಾರತ ಎ ತಂಡದ ಪರ ಪ್ರಿಯಾಂಶ್ ಆರ್ಯ (44) ವೈಭವ್ ಸೂರ್ಯವಂಶಿ (38) ನಾಯಕ ಜಿತೀಶ್ ಶರ್ಮಾ (33) ನೇಹಲ್ ವಧೇರಾ (32) ಹಾಗೂ ರಮಣದೀಪ್ ಸಿಂಗ್ (17) ರನ್ ಗಳಿಸಿದರು.

ಕೊನೆಯ ಓವರ್ ನಲ್ಲಿ ಭಾರತದ ಗೆಲುವಿಗೆ 16 ಹಾಗೂ ಕೊನೆಯ ಎಸೆತದಲ್ಲಿ ನಾಲ್ಕು ರನ್ ಗಳ ಅಗತ್ಯವಿತ್ತು. ಅಂತಿಮ ಓವರ್ ನಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದ ಅಶುತೋಷ್ ಶರ್ಮಾ ಐದನೇ ಎಸೆತದಲ್ಲಿ ಔಟ್ ಆದರು. ಆದರೆ ಕೊನೆಯ ಎಸೆತದಲ್ಲಿ ಹರ್ಷ್ ದುಬೆ ಮೂರು ರನ್ ಗಳಿಸುವುದರೊಂದಿಗೆ ಪಂದ್ಯ ಟೈ ಆದ್ದರಿಂದ ವಿಜೇತರನ್ನು ಗುರುತಿಸಲು ಸೂಪರ್ ಓವರ್ ಮೊರೆ ಹೋಗಲಾಯಿತು.

ಸೂಪರ್ ಓವರ್ ನ ಮೊದಲ ಎಸೆತದಲ್ಲಿ ನಾಯಕ ಜಿತೇಶ್ ಶರ್ಮಾ ಕ್ಲೀನ್ ಬೌಲ್ಡ್ ಆಗುವ ಮೂಲಕ ಕೈಕೊಟ್ಟರು. ಬಳಿಕದ ಎಸೆತದಲ್ಲಿ ಅಶುತೋಷ್ ಕೂಡಾ ಔಟ್ ಆದರು. ಆದಾಗ್ಯೂ, ಮೊದಲ ಎಸೆತದಲ್ಲಿ ವಿಕೆಟ್ ಕಬಳಿಸುವಲ್ಲಿ ಸುಯಶ್ ಶರ್ಮಾ ಯಶಸ್ವಿಯಾದರು. ಎರಡನೇ ಎಸೆತ ವೈಡ್ ಆಗುವುದರೊಂದಿಗೆ ಭಾರತದ ಫೈನಲ್ ಕನಸು ಭಗ್ನಗೊಂಡಿತು.

ನವೆಂಬರ್ 23 ರ ಭಾನುವಾರ ದೋಹಾದಲ್ಲಿ ನಡೆಯುವ ಫೈನಲ್‌ನಲ್ಲಿ ಬಾಂಗ್ಲಾದೇಶ ಈಗ ಪಾಕಿಸ್ತಾನ ಅಥವಾ ಶ್ರೀಲಂಕಾವನ್ನು ಎದುರಿಸಲಿದೆ.

error: Content is protected !!