ಏಷ್ಯನ್ ಗೇಮ್ಸ್‌: ವುಶುನಲ್ಲಿ ಭಾರತಕ್ಕೆ ಪದಕ ಖಚಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 60 ಕೆಜಿ ವಿಭಾಗದ ವುಶುನಲ್ಲಿ ಭಾರತದ ಅನುಭವಿ ವುಶು ತಾರೆ ರೋಶಿಬಿನಾ ದೇವಿ ನೌರೆಮ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ರೋಶಿಬಿನಾ ತಮ್ಮ ಕ್ವಾರ್ಟರ್-ಫೈನಲ್ ಹಣಾಹಣಿಯಲ್ಲಿ ಕಜಕಿಸ್ತಾನ್‌ನ ಐಮನ್ ಕಾರ್ಶಿಗಾ ವಿರುದ್ಧ ಗ್ಯಾಪ್ ಪಾಯಿಂಟ್‌ನಿಂದ ಗೆದ್ದರು.ಈ ಮೂಲಕ ಪದಕ ಖಚಿತವಾಗಿದೆ.

2018 ರಲ್ಲಿ ಜಕಾರ್ತದಲ್ಲಿ ಕಂಚಿನ ಪದಕ ಗೆದ್ದಿದ್ದ ರೋಶಿಬಿನಾ ದೇವಿ ನೌರೆಮ್ ಅವರಿಗೆ ಏಷ್ಯಾಡ್ ಮಟ್ಟದಲ್ಲಿ ಇದು ಎರಡನೇ ಪದಕವಾಗಿದೆ. ಇದು ಏಷ್ಯನ್ ಗೇಮ್ಸ್ 2023 ರಲ್ಲಿ ವುಶುನಲ್ಲಿ ಭಾರತಕ್ಕೆ ಮೊದಲ ಪದಕವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!