ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ನೆರೆಯ ರಾಷ್ಟ್ರ ನೇಪಾಳ ಯುವ ದಂಗೆಗೆ ಹೊತ್ತಿ ಉರಿಯುತ್ತಿದೆ. ಸತತ 3ನೇ ದಿನವೂ ನೇಪಾಳ ಕುದಿಯುತ್ತಿದೆ. ಆಂತರ್ಯುದ್ಧಕ್ಕೆ ಶ್ರೀಲಂಕಾ, ಬಾಂಗ್ಲಾದೇಶದಂತೆ ನೇಪಾಳವೂ ಬದಲಾಗಿದೆ. ರಾಜಧಾನಿ ಕಠ್ಮಂಡುವಿನಲ್ಲಿ ಭಾರೀ ಪ್ರತಿಭಟನೆ, ಯುವಕರ ಕೋಪತಾಪಕ್ಕೆ ನೇಪಾಳದ ಓಲಿ ಸರ್ಕಾರ ಮಂಡಿಯೂರಿದೆ.
ಸೋಷಿಯಲ್ ಮೀಡಿಯಾ ನಿಷೇಧ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದ ಬೆನ್ನಲ್ಲೇ ನಿಷೇಧ ಆದೇಶವನ್ನು ನಿನ್ನೆ ರಾತ್ರಿಯೇ ವಾಪಸ್ ಪಡೆದಿದ್ದರೂ, ಹಿಂಸಾಚಾರ ತಣ್ಣಗಾಗಿಲ್ಲ.
ಕಠ್ಮಂಡು ಹಿಂಸಾಚಾರದ ಹೊಸ ವಿಡಿಯೋಗಳು ವೈರಲ್ ಆಗಿದ್ದು, ಸುಮಾರು 120 ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಏಷ್ಯಾದ ಅತಿದೊಡ್ಡ ಅರಮನೆಯಾದ ʻಸಿಂಹ ದರ್ಬಾರ್ʼಗೂ ಬೆಂಕಿ ಹಚ್ಚಿದ್ದಾರೆ.
1903ರಲ್ಲಿ ನೇಪಾಳದ ಪ್ರಧಾನಿಯ ಅಧಿಕೃತ ನಿವಾಸವಾಗಿ ಈ ಅರಮನೆಯನ್ನ ನಿರ್ಮಿಸಲಾಗಿತ್ತು. ಬಳಿಕ ಐತಿಹಾಸಿಕ ಅರಮನೆಯಾಗಿ ಗುರುತಿಸಿಕೊಂಡಿದ್ದ ಈ ಅರಮನೆಯನ್ನ ಪ್ರವಾಸಿ ತಾಣವಾಗಿಯೂ ಮಾಡಲಾಗಿತ್ತು. ಇದೀಗ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದ್ದಲ್ಲದೇ ಇದ್ದಬದ್ದ ವಸ್ತುಗಳೆಲ್ಲವನ್ನು ಲೂಟಿ ಮಾಡಿದೆ.