August 24, 2026
Monday, August 24, 2026
spot_img

ಇರಾನ್–ಇಸ್ರೇಲ್ ಯುದ್ಧ | ಭಾರತಕ್ಕೆ ಆರ್ಥಿಕ ಹೊಡೆತದ ಭೀತಿ: ತೈಲ ಬೆಲೆ ಹೆಚ್ಚಾಗುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಯುದ್ಧದ ಮಬ್ಬು ಗಾಢವಾಗುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಾಗಿದೆ. ಅಮೆರಿಕ–ಇಸ್ರೇಲ್ ಜಂಟಿ ದಾಳಿಗಳ ಬಳಿಕ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದ್ದು, ಇರಾನ್ ಪ್ರತಿದಾಳಿ ಕ್ರಮಗಳನ್ನು ವೇಗಗೊಳಿಸಿದೆ.

ಇಸ್ರೇಲ್ ಜೊತೆಗೆ ಮುಸ್ಲಿಂ ರಾಷ್ಟ್ರಗಳಲ್ಲಿರುವ ಅಮೆರಿಕ ಸೇನಾ ತಾಣಗಳನ್ನೂ ಗುರಿಯಾಗಿಸುತ್ತಿದೆ ಎಂಬ ವರದಿಗಳು ಹರಿದಾಡುತ್ತಿವೆ. ಇರಾನ್‌ಗೆ ದೇಶದಲ್ಲಿ ಮಧ್ಯಂತರ ಸುಪ್ರೀಂ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವಾಗ, ಪ್ರಮುಖ ಮಸೀದಿಯ ಮೇಲೆ ಕೆಂಪು ಧ್ವಜ ಹಾರಿಸಿರುವುದು ಕಠಿಣ ಪ್ರತಿದಾಳಿಯ ಸೂಚನೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ:

ಈ ಬೆಳವಣಿಗೆಗಳು ಜಾಗತಿಕ ಆರ್ಥಿಕತೆಗೆ ಆತಂಕ ತಂದಿವೆ. ಇಂಡಿಯಾ ಸೇರಿದಂತೆ ಹಲವು ದೇಶಗಳು ಇಂಧನ ಸರಬರಾಜಿನ ಅಸ್ಥಿರತೆಯಿಂದ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ವಿಶೇಷವಾಗಿ ಹಾರ್ಮೂಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಾದರೆ ತೈಲ ಸಾಗಾಟಕ್ಕೆ ಅಡಚಣೆ ಉಂಟಾಗಬಹುದು. ಯುಎಇ, ಸೌದಿ ಅರೇಬಿಯಾ ಹಾಗೂ ಬಹ್ರೇನ್‌ನಿಂದ ಬರುವ ಕಚ್ಚಾ ತೈಲ ಸರಬರಾಜು ವ್ಯತ್ಯಯಗೊಳ್ಳುವ ಭೀತಿ ಇದೆ.

ತೈಲದ ಬೆಲೆ ಏರಿದರೆ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ಅನಿವಾರ್ಯ. ಇದರ ಪರಿಣಾಮವಾಗಿ ಕಚ್ಚಾ ವಸ್ತುಗಳ ಬೆಲೆ ಏರಿಕೆ, ಹಾಗೂ ಡಾಲರ್ ಮೌಲ್ಯ ಏರಿಕೆಯಿಂದ ಭಾರತೀಯ ಆರ್ಥಿಕತೆಯ ಮೇಲೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !