ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಪ್ರಿಯ ವೆಬ್ ಸೀರಿಸ್ ‘ಪಂಚಾಯತ್’ ಮೂಲಕ ಮನೆಮಾತಾಗಿರುವ ನಟ ಆಸಿಫ್ ಖಾನ್ ಅವರಿಗೆ ಇತ್ತೀಚೆಗೆ ಹೃದಯಾಘಾತವಾಗಿದ್ದು, ತೀವ್ರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತದರಿಂದ ಅವರು ಅಪಾಯದಿಂದ ಪಾರಾಗಿ, ಆರೋಗ್ಯ ಸ್ಥಿರವಾಗಿದ್ದು, ನಿಧಾನವಾಗಿ ಚೇತರಿಸುತ್ತಿದ್ದಾರೆ. ಈ ಬಗ್ಗೆ ಆಸಿಫ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, ಜೀವನದ ಬಗ್ಗೆ ಆಳವಾದ ಸಂದೇಶವನ್ನು ನೀಡಿದ್ದಾರೆ.
ಅವರು ಮೊದಲ ಪೋಸ್ಟ್‌ನಲ್ಲಿ ಆಸ್ಪತ್ರೆಯ ಛಾವಣಿಯ ಫೋಟೋ ಹಂಚಿಕೊಂಡು, “ಜೀವನ ತುಂಬಾ ಸಣ್ಣದು” ಎಂದು ಬರೆದು ತಮ್ಮ ಆತ್ಮಾನುಭವ ವ್ಯಕ್ತಪಡಿಸಿದ್ದಾರೆ. “ಕಳೆದ 36 ಗಂಟೆಗಳ ಅನುಭವ ನನ್ನ ಜೀವನದ ದೃಷ್ಟಿಕೋನವನ್ನೇ ಬದಲಿಸಿದೆ. ಒಂದು ದಿನವನ್ನೂ ಬಿಡುವಿಲ್ಲದೆ ಬದುಕಬೇಕು. ಕ್ಷಣ ಮಾತ್ರದಲ್ಲಿ ಎಲ್ಲವೂ ಬದಲಾಗಬಹುದು. ನಿಮ್ಮ ಬಳಿ ಇರುವದಕ್ಕೇ ಧನ್ಯರಾಗಿರಿ. ಯಾರು ನಿಮ್ಮ ಬದುಕಿನಲ್ಲಿ ಮುಖ್ಯವೋ ಅವರ ಪ್ರೀತಿಯ ಮೌಲ್ಯವನ್ನು ತಿಳಿದುಕೊಳ್ಳಿ,” ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಸ್ಟೋರಿ updateನಲ್ಲಿ ಅವರು, “ನಾನು ಈಗ ರಿಕವರಿ ಹಂತದಲ್ಲಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದ ಎಲ್ಲರಿಗೂ ಧನ್ಯವಾದ. ನಿಮ್ಮ ಪ್ರೀತಿ ಮತ್ತು ಬೆಂಬಲ ನನಗೆ ಬಹುಮೂಲ್ಯ,” ಎಂದು ಕೃತಜ್ಞತೆಯ ಭಾವ ವ್ಯಕ್ತಪಡಿಸಿದ್ದಾರೆ.
ಆಸಿಫ್ ಖಾನ್ ಅವರ ಸಿನಿ ಪ್ರಯಾಣ 2018ರ ‘ಮಿರ್ಜಾಪುರ್’ ವೆಬ್ ಸರಣಿಯಿಂದ ಆರಂಭವಾಗಿತ್ತು. ಅವರು ಬಾಬರ್ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದರು. ನಂತರ ‘ಪಂಚಾಯತ್’ ವೆಬ್ ಸೀರಿಸ್‌ನಲ್ಲಿ ನಟಿಸಿದ ಪಾತ್ರದಿಂದ ಅವರು ಜನಪ್ರಿಯತೆ ಗಳಿಸಿದರು. ಇತ್ತೀಚಿನ ‘ಪಂಚಾಯತ್ ಸೀಸನ್ 3’ನಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಜನಪ್ರಿಯತೆಗೆ ಪೂರಕವಾಗಿ ಅವರಿಗೆ ಹಲವಾರು ಹೊಸ ಅವಕಾಶಗಳು ಕೂಡ ಸಿಕ್ಕಿದ್ದವು.
ಆದರೆ ಈ ಹೃದಯಾಘಾತದ ಘಟನೆ ಅವರ ಚಲನಚಿತ್ರ ಕೆಲಸಗಳಿಗೆ ತಾತ್ಕಾಲಿಕ ವಿರಾಮ ತರಿಸಿರುವುದು ವಿಷಾದಕರ ಸಂಗತಿ. ತಾವು ಕಳೆದುಬಿಟ್ಟಿದ್ದನ್ನು ಹೇಗೆ ಮರಳಿ ಪಡೆಯಬೇಕು ಎಂಬ ಪಾಠವನ್ನು ಆಸಿಫ್ ಖಾನ್ ಅವರ ಈ ಬದುಕಿನ ಅನುಭವ ಮನಸ್ಸನ್ನು ಮುಟ್ಟಿದೆ.