ಅಸಿಮ್ ಮುನೀರ್ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ: ಇದು ನನ್ನ ನಿರ್ಧಾರ ಎಂದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡುವ ನಿರ್ಧಾರವನ್ನು ತಾವೇ ತೆಗೆದುಕೊಂಡಿರುವುದಾಗಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಬುಧವಾರ ಹೇಳಿದ್ದಾರೆ.

ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜನರಲ್ ಮುನೀರ್ ಅವರನ್ನು ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಶ್ರೇಣಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಇದೀಗ ಈ ನಿರ್ಧಾರ ನನ್ನದೇ ಆಗಿತ್ತು ಎಂದು ಪಾಕ್ ಪ್ರಧಾನಿ ಮಾಧ್ಯಮಗಳಿಗೆ ತಿರಿಳಿಸರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.

ಇಂತಹ ನಿರ್ಣಾಯಕ ನಿರ್ಧಾರಗಳ ಬಗ್ಗೆ ತಮ್ಮ ಹಿರಿಯ ಸಹೋದರ ಮತ್ತು ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರನ್ನು ಸಂಪರ್ಕಿಸಿರುವುದಾಗಿ ಪಾಕ್ ಪ್ರಧಾನಿ ತಿಳಿಸಿದ್ದಾರೆ.

ಯುದ್ಧವು ಒಂದು ದೇಶದ ಗೆಲುವು ಮತ್ತು ಇನ್ನೊಂದು ದೇಶದ ನಷ್ಟಕ್ಕೆ ಮಾತ್ರ ಕಾರಣವಾಗುತ್ತದೆ . ಶಾಶ್ವತ ಶಾಂತಿ ಮಾತ್ರ ಸುರಕ್ಷಿತ ಭವಿಷ್ಯವನ್ನು ಖಾತರಿಪಡಿಸುತ್ತದೆ ಎಂದು ಹೇಳಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!