HEALTH | ಬೆಳಗಿನ ಈ ಅಭ್ಯಾಸಗಳು ಜೀವನವನ್ನೇ ಬದಲಾಯಿಸದಿದ್ರೆ ಕೇಳಿ!

ದಿನದಲ್ಲಿ ಬೆಳಗ್ಗೆ ಸಮಯ ತುಂಬಾನೇ ಅಮೂಲ್ಯ. ಒಂದು ದಿನವನ್ನು ನೀವು ಹೇಗೆ ಆರಂಭಿಸುತ್ತೀರ ಎನ್ನುವುದರ ಮೇಲೆ ನಿಮ್ಮ ಇಡೀ ದಿನ ನಿರ್ಧರಿತವಾಗುತ್ತದೆ. ಬೆಳಗ್ಗೆ ಮನೆಯಲ್ಲಿ ಯಾರಾದರೂ ಬೈದರೆ ಬೆಳಗ್ಗೆಯೇ ಬೈಬೇಡ ಎಂದು ಕೂಗಾಡ್ತೀರಿ, ನಿಮ್ಮ ಮೂಡ್ ಕೂಡ ಹಾಳಾಗುತ್ತದೆ. ಪ್ರತಿ ದಿನ ಈ ಒಂಬತ್ತು ಅಭ್ಯಾಸಗಳನ್ನು ಮಾಡಿಕೊಳ್ಳಿ.. ನಿಮ್ಮ ಜೀವನ ಬದಲಾಗದಿದ್ರೆ ಕೇಳಿ..

  1. ಅಲಾರಾಂ ಕ್ಲಾಕ್ ಅಥವಾ ಮೊಬೈಲ್‌ನ್ನು ನಿಮ್ಮ ಕೈಗೇ ಸಿಗುವ ಹಾಗೆ ಇಟ್ಟುಕೊಂಡು ಮಲಗಬೇಡಿ, ಸ್ವಲ್ಪ ದೂರದಲ್ಲಿ ಇಡಿ, ಅದನ್ನು ಆಫ್ ಮಾಡಲು ಎದ್ದು ಹೋಗಲೇಬೇಕಲ್ವಾ?
  2. ಬೆಳಗ್ಗೆ ಎದ್ದು ಮೊಬೈಲ್ ನೋಡುವ ಬದಲು ಬೆಡ್ ಮೇಲೆ ಕುಳಿತು ಒಂದು ಪುಟ ನಿಮ್ಮಿಷ್ಟದ ಪುಸ್ತಕ ಓದು, ಸ್ಫೂರ್ತಿ ಸಿಕ್ಕೇ ಸಿಗುತ್ತದೆ.
  3. ಬೆಳಗ್ಗೆ ಎದ್ದ ನಂತರ ಹಾಸಿಗೆಯನ್ನು ಸರಿಮಾಡಿ, ಬೆಡ್‌ಶೀಟ್ ಮಡಚಿ, ಹಾಸಿಗೆ ಕೊಡವಿ ವಾಪಾಸ್ ಕ್ಲೀನ್ ಮಾಡಿ ಮುಂದಿನ ಕೆಲಸ ಮಾಡಿ.
  4. ಇಂದು ಏನೆಲ್ಲಾ ಮಾಡಬೇಕು, ಒಂದು ಲಿಸ್ಟ್ ಮಾಡಿ ಬರೆದಿಡಿ. ಆ ಕೆಲಸಗಳನ್ನು ಇಂದು ಮಾಡಿ ಮುಗಿಸಿ.
  5. ಬೆಳಗ್ಗೆಯೇ ಎದ್ದ ನಂತರ ಕಿಟಕಿ, ಬಾಗಿಲುಗಳನ್ನು ತೆಗೆದು ಒಳ್ಳೆಯ ಗಾಳಿ ಬೆಳಕು ಒಳಗೆ ಬರಲು ಬಿಡಿ
  6. ಪ್ರತಿ ದಿನ ಒಂದೇ ಸಮಯಕ್ಕೆ ಏಳಬೇಕು, ಕನ್ಸಿಸ್ಟೆನ್ಸಿ ಮುಖ್ಯ.
  7. ಬೆಳಗ್ಗೆ ವ್ಯಾಯಾಮ, ಜಿಮ್, ಯೋಗ, ವಾಕ್ ಯಾವುದಾದರೂ ಒಂದು ಮಾಡಬೇಕು.
  8. ಬೆಳಗ್ಗೆ ಎದ್ದ ತಕ್ಷಣ ಫೋನ್ ಮುಟ್ಟದೇ ಇರುವುದು ಬೆಸ್ಟ್ಉ
  9. ತ್ತಮವಾದ ಆಹಾರ ತಿನ್ನುವುದು ಬೆಸ್ಟ್, ಬೆಳಗ್ಗೆ ಆರೋಗ್ಯಕರ ತಿಂಡಿ ಮಾಡಿಕೊಂಡು ಯಾವುದೇ ಒತ್ತಡ ಇಲ್ಲದೆ ಸೇವಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!