ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾಚಣಾ ಸಂದರ್ಭದಲ್ಲಿ ಗೆಲ್ಲೋಕೆ ಏನೋ ಒಂದು ಹೇಳಿದ್ದಾರೆ. ಈಗ ಹೇಳಿದ ಮಾತನ್ನು ಉಳಿಸಿಕೊಳ್ಳೋಕಾಗದೆ ಕೇಂದ್ರದ ಮೇಲೆ ಗೂಬೆ ಕೂರಿಸ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.
ಗ್ಯಾರೆಂಟಿಗಳನ್ನು ಈಡೇರಿಸೋಕೆ ಆಗದೇ ಹೋದ್ರೆ ಅಧಿಕಾರ ಬಿಟ್ಟು ಕೆಳಗಿಳಿಲಿ, ಗ್ಯಾರೆಂಟಿ ಕೊಡುವಾಗ ಕೇಂದ್ರ ಸರ್ಕಾರವನ್ನು ನಂಬಿಕೊಂಡು ಕೊಟ್ಟಿದ್ರಾ? ಮಾತಿಗೆ ಹೇಳಿಬಿಟ್ರು, ಈಗ ಈಡೇರಿಸೋಕಾಗ್ದೆ ದಿನಕ್ಕೊಂದು ನಾಟಕ ಆಡ್ತಾರೆ ಎಂದು ಹೇಳಿದ್ದಾರೆ. ಬೇರೆ ಏನೂ ಗೊತ್ತಿಲ್ಲ ಬಡವರ ವಿಷಯದಲ್ಲಿ ನಾಟಕ ಆಡೋ ಹಾಗಿಲ್ಲ, 10 ಕೆ.ಜಿ ಅಕ್ಕಿ ಕೊಡಿ ಇಲ್ಲ ಅಧಿಕಾರ ಬಿಟ್ಟು ತೊಲಗಿ ಎಂದಿದ್ದಾರೆ.