ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷ ಅಸ್ಸಾಂನಲ್ಲಿ ಮತ್ತೆ ಪ್ರವಾಹ ಉಂಟಾಗಿದೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ ಅಸ್ಸಾಂ ರಾಜ್ಯದ ಹಲವು ನದಿಗಳು ಪ್ರವಾಹದ ನೀರಿನಿಂದ ತುಂಬಿ ಹರಿಯುತ್ತಿವೆ. ಲಖಿಂಪುರ, ದಿಮಾಜಿ, ದಿಬ್ರುಘಡ್, ಕ್ಯಾಚಾರ್, ನಲ್ಬರಿ ಮತ್ತು ಕಾಮ್ರೂಪ್ ಜಿಲ್ಲೆಗಳ 25 ಗ್ರಾಮಗಳಿಗೆ ಪ್ರವಾಹದ ನೀರು ಬಂದಿದೆ. ಪ್ರವಾಹದಿಂದ 29 ಸಾವಿರ ಜನರು ಸಂತ್ರಸ್ತರಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ಬಹಿರಂಗಪಡಿಸಿದೆ. ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಪ್ರವಾಹದಿಂದಾಗಿ ಅಸ್ಸಾಂನಲ್ಲಿ 215 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಲಖಿಂಪುರ ಜಿಲ್ಲೆಯೊಂದರಲ್ಲೇ 1215 ಮಕ್ಕಳು ಮತ್ತು 23,516 ಜನರು ಪ್ರವಾಹದಿಂದಾಗಿ ನಿರಾಶ್ರಿತರಾಗಿದ್ದಾರೆ. ಪ್ರವಾಹ ಪೀಡಿತ ಲಖೀಂಪುರ ಜಿಲ್ಲೆಯಲ್ಲಿ ಮೂರು ಪರಿಹಾರ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅಸ್ಸಾಂ ರಾಜ್ಯದಲ್ಲಿ 6,307 ಪ್ರಾಣಿಗಳು ಮತ್ತು ಹಲವು ಕೋಳಿಗಳು ಪ್ರವಾಹದ ನೀರಿನಿಂದ ಹಾನಿಗೊಳಗಾಗಿವೆ. ದಿಮಾಯಿ, ಬಿಶ್ವನಾಥ್, ಗೋಲ್ಪಾರಾ ಮತ್ತು ಲಖಿಂಪುರ ಜಿಲ್ಲೆಗಳ ನಾಲ್ಕು ರಸ್ತೆಗಳು ಪ್ರವಾಹದ ನೀರಿನ ಹರಿವಿನಿಂದ ಹಾಳಾಗಿವೆ. ಕ್ಯಾಚಾರ್ ಮತ್ತು ಕನ್ರೂಪ್ನಲ್ಲಿ ಭಾರಿ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ.