ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿನಾಶಕಾರಿ ಅಸ್ಸಾಂ ಪ್ರವಾಹದಲ್ಲಿ, ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಆರು ಘೇಂಡಾಮೃಗಗಳು ಸೇರಿದಂತೆ 137 ಕಾಡು ಪ್ರಾಣಿಗಳು, ಅಸ್ಸಾಂ ಪ್ರವಾಹದಲ್ಲಿ ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಯಾನದ ಅಧಿಕಾರಿಗಳು ಎರಡು ರೈನೋ ಕರುಗಳು ಮತ್ತು ಎರಡು ಆನೆ ಕರುಗಳು ಸೇರಿದಂತೆ 99 ಪ್ರಾಣಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರವಾಹದ ನೀರಿನಲ್ಲಿ ಮುಳುಗಿ 104 ಜಿಂಕೆಗಳು ಸಾವನ್ನಪ್ಪಿದ್ದರೆ, ವಾಹನ ಡಿಕ್ಕಿ ಹೊಡೆದು 2 ಜಿಂಕೆಗಳು ಸಾವನ್ನಪ್ಪಿವೆ ಎಂದು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಕ್ಷೇತ್ರ ನಿರ್ದೇಶಕ ಸೋನಾಲಿ ಘೋಷ್ ತಿಳಿಸಿದ್ದಾರೆ.
“ಇದುವರೆಗೆ ನಾವು ಎರಡು ಘೇಂಡಾಮೃಗಗಳು, ಎರಡು ಆನೆಗಳು, 84 ಹಾಗ್ ಜಿಂಕೆಗಳು, 3 ಸ್ವಾಂಪ್ ಜಿಂಕೆಗಳು, 99 ಪ್ರಾಣಿಗಳನ್ನು ರಕ್ಷಿಸಿದ್ದೇವೆ” ಎಂದು ಸೋನಾಲಿ ಘೋಷ್ ಹೇಳಿದರು. ಉದ್ಯಾನವನದಲ್ಲಿರುವ 233 ಶಿಬಿರಗಳಲ್ಲಿ 70 ಅರಣ್ಯ ಶಿಬಿರಗಳು ಇನ್ನೂ ನೀರಿನಲ್ಲಿ ಮುಳುಗಿವೆ ಎಂದು ಹೇಳಿದ್ದಾರೆ.