ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರ್ಚ್ 27 ರಂದು ಭೂಕುಸಿತದಲ್ಲಿ ಯೋಧರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಅವಶೇಷಗಳ ಅಡಿಯಲ್ಲಿ ಸಿಕ್ಕ ಮೃತದೇಹವನ್ನು ಸುಬೇದಾರ್ ಎಎಸ್ ಢಗಲೆ ಎಂದು ಗುರುತಿಸಿರುವುದಾಗಿ ರಕ್ಷಣಾ ಪಿಆರ್‌ಒ ತಿಳಿಸಿದ್ದಾರೆ.
ಮೃತ ಜವಾನ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರು. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಮಾರ್ಚ್ 27 ರಂದು ಹಠಾತ್ ಭೂಕುಸಿತದ ನಂತರ ಅವಶೇಷಗಳಡಿ ಸಿಲುಕಿದ್ದ ಸುಬೇದಾರ್ ಎಎಸ್ ಢಗಲೆ ಅವರ ಪಾರ್ಥಿವ ಶರೀರವನ್ನು ನಿನ್ನೆ ಹೊರತೆಗೆಯಲಾಯಿತು.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.