ಹೊಸದಿಗಂತ ಡಿಜಿಟಲ್ ಡೆಸ್ಕ್
ಪೂರ್ವೋತ್ತರ ರಾಜ್ಯಗಳಲ್ಲಿ ಭಾರೀ ಮಳೆಯಾಗಿದ್ದು, ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ನೈಋತ್ಯ ಮಾನ್ಸೂನ್ ಮಾರುತಗಳು ಅಸ್ಸಾಂ ಹಾಗೂ ಮೇಘಾಲಯದಲ್ಲಿ ಭಾರೀ ಮಳೆಯಾಗಿದೆ.
ಶುಕ್ರವಾರ ಸುರಿದ ಭಾರೀ ಮಳೆಗೆ ಈ ರಾಜ್ಯಗಳು ಸಂಪೂರ್ಣ ಜಲಾವೃತಗೊಂಡಿವೆ.ಅಸ್ಸಾಂ ರಾಜಧಾನಿ ಗುವಾಹಟಿ ಹಾಗೂ ಮೇಘಾಲಯದ ಗಡಿಯಾದ್ಯಂತ ಇರುವ ಗ್ರಾಮಗಳು ನೀರಿನಿಂದ ಮುಳುಗಿವೆ.
ರಸ್ತೆಯಲ್ಲಿ ನಿಂತಿರುವ ಕಾರುಗಳೇ ಮುಳುಗಡೆಯಾಗಿದ್ದು, ನಾಳೆಯೂ ಭಾರೀ ಮಳೆಯಾಗಲಿದ್ದು, ಜೂನ್ 7 ರವರೆಗೆ ನಿರಂತರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಡಿಶಾ ಉತ್ತರ ಕರಾವಳಿ, ಪಶ್ಚಿಮ ಬಂಗಾಳದಲ್ಲೂ ಭಾರೀ ಮಳೆ ಜತೆಗೆ ಚಂಡಮಾರುತದ ಭೀತಿ ಎದುರಾಗಿದೆ. ಮುಂದಿನ ಐದು ದಿನಗಳಲ್ಲಿ ಸಿಕ್ಕಿಂನಲ್ಲೂ ಭಾರೀ ಮಳೆಯಾಗಲಿದೆ.