ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲಾ ಸರ್ಕಾರಿ ಅಧಿಸೂಚನೆಗಳು, ಆದೇಶಗಳು ಮತ್ತು ಕಾಯ್ದೆಗಳಿಗೆ `ಅಸ್ಸಾಮಿ’ ಭಾಷೆ ಕಡ್ಡಾಯ ಆದೇಶ ಇಂದಿನಿಂದಲೇ ಜಾರಿಯಾಗಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಘೋಷಿಸಿದ್ದಾರೆ.
“ರಾಜ್ಯದ ಎಲ್ಲಾ ಸರ್ಕಾರಿ ಅಧಿಸೂಚನೆಗಳು, ಆದೇಶಗಳು ಅಸ್ಸಾಮಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿರುತ್ತದೆ. ಕಾಯಿದೆಗಳು, ನಿಯಮಗಳು, ನಿಬಂಧನೆಗಳು ಮತ್ತು ಅಧಿಸೂಚನೆಗಳನ್ನು ಒಳಗೊಂಡಿರುವ ಪರಂಪರೆ ದಾಖಲೆಗಳನ್ನು ಎರಡು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಅಸ್ಸಾಮಿ ಭಾಷೆಗೆ ಅನುವಾದಿಸಲಾಗುತ್ತದೆ. ಇಂಗ್ಲಿಷ್‌ನಿಂದ ಅಸ್ಸಾಮಿ, ಬಂಗಾಳಿ ಮತ್ತು ಬೋಡೋ ಭಾಷೆಗೆ ಭಾಷಾಂತರಿಸಲು ‘ಅನುವಾದ್ ಭಾಷಿಣಿ’ ಅಪ್ಲಿಕೇಶನ್ ಬಳಸುವಂತೆ ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ” ಎಂದು ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.