ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ: ಮುರುಗನ್ ಸಹಿತ ಮೂವರು ಅಪರಾಧಿಗಳು ಶ್ರೀಲಂಕಾಗೆ ವಾಪಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಮೂವರು ಅಪರಾಧಿಗಳು ಭಾರತ ತೊರೆದಿದ್ದಾರೆ.

ಮುರುಗನ್ ಯಾನೆ ಶ್ರೀಹರನ್, ಜಯಕುಮಾರ್ ಹಾಗೂ ರಾಬರ್ಟ್ ಪಯಸ್ ಇದುವರೆಗೆ 30 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದು, ಸದ್ಯ ಅವರ ಸಹಿತ ಈ ಪ್ರಕರಣದ ಒಟ್ಟು ಏಳು ಮಂದಿಯನ್ನು ತಿರುಚಿರಾಪಳ್ಳಿಯ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು.

ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಗಡೀಪಾರು ಆದೇಶ ಹೊರಡಿಸಿದ ಬಳಿಕ ಅವರು ಸ್ವದೇಶಕ್ಕೆ ಮರಳಬಹುದು ಎಂದು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್‌ಗೆ ಈ ಹಿಂದೆ ತಿಳಿಸಿತ್ತು. ಅಲ್ಲದೆ ಶ್ರೀಲಂಕಾ ಹೈಕಮಿಷನ್ ಈ ಹಿಂದೆಯೇ ಅವರಿಗೆ ಸ್ವದೇಶಕ್ಕೆ ಮರಳಲು ಪ್ರಯಾಣ ದಾಖಲೆಗಳನ್ನು ನೀಡಿತ್ತು. ಇದೀಗ ಈ ಮೂವರು ಕೊಲಂಬೊಗೆ ತೆರಳಿದ್ದಾರೆ.

1991ರ ಮೇ 21ರ ರಾತ್ರಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಯಲ್ಲಿ ಹಲವರು ಸಾವನ್ನಪ್ಪಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!