April 10, 2026
Friday, April 10, 2026
spot_img

ಇರಾನ್‌ ಸರ್ವೋಚ್ಛ ನಾಯಕ ಖಮೇನಿ ಹತ್ಯೆ: ಕರಾಚಿಯಲ್ಲಿ ಅಮೆರಿಕಾದ ದೂತವಾಸದ ಮುಂದೆ ಪ್ರತಿಭಟನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮೇಲಿನ ದಾಳಿ ಖಂಡಿಸಿ ಪಾಕಿಸ್ತಾನದ ಕರಾಚಿಯಲ್ಲಿರುವ ಅಮೆರಿಕಾ ದೂತವಾಸ(ರಾಯಭಾರ ಕಚೇರಿ) ಮುಂದೆ ಕೆಲವರು ಪ್ರತಿಭಟನೆ ನಡೆಸಿದ್ದು, ಭಾನುವಾರ ಪ್ರತಿಭಟನೆಗಳು ನಡೆದಿವೆ. ಈ ವೇಳೆ, ಇರಾನ್ ಪರ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಘರ್ಷಣೆ ಉಂಟಾಗಿದ್ದು, ಕನಿಷ್ಟ 10 ಜನ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ .

ಇರಾನ್‌ನಲ್ಲಿ ಅಲ್ಲಿನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹಾಗೂ ಇರಾನ್‌ನ ಹಲವು ಉನ್ನತ ಮಟ್ಟದ ನಾಯಕರನ್ನು ಇಸ್ರೇಲ್ ಹಾಗೂ ಅಮೆರಿಕಾ ಭದ್ರತಾ ಪಡೆಗಳು ಜಂಟಿ ಕ್ಷಿಪಣಿ ದಾಳಿ ನಡೆಸಿ ಹತ್ಯೆ ಮಾಡಿದ್ದು, ಈ ಹತ್ಯೆಯನ್ನು ಖಂಡಿಸಿ ಅಮೆರಿಕದ ದೂತವಾಸಕ್ಕೆ ನುಗ್ಗಿದ ನೂರಾರು ಜನರು, ಅಲ್ಲಿನ ಕಿಟಕಿ ಗಾಜುಗಳನ್ನು ಧ್ವಂಸಗೈದಿದ್ದಾರೆ . ಈ ವೇಳೆ ಪೊಲೀಸರು ಮತ್ತು ಅರೆಸೇನಾ ಪಡೆಗಳು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ನಡೆಸಿದ್ದಾರೆ.

ಪಾಕಿಸ್ತಾನದ ಪೂರ್ವ ನಗರವಾದ ಲಾಹೋರ್ ಮತ್ತು ಉತ್ತರದ ಸ್ಕಾರ್ದುನಲ್ಲೂ ಸಾವಿರಾರು ಜನರು ಬೀದಿಗಿಳಿದಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಇರುವ ರಾಜತಾಂತ್ರಿಕ ಪ್ರದೇಶದ ಬಳಿ ಪ್ರತಿಭಟನೆ ನಡೆದಿದೆ ಎಂದು ವರದಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !