March 11, 2026
Wednesday, March 11, 2026
spot_img

ಖಮೇನಿ ಹತ್ಯೆ ಬೆನ್ನಲ್ಲೇ ಇರಾನ್‌ ಮಧ್ಯಂತರ ಸುಪ್ರೀಂ ಲೀಡರ್‌ ಆಗಿ ಅಲಿರೆಜಾ ಅರಾಫಿ ಆಯ್ಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಾ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ ನ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಇದರ ಬಳಿಕ ಖಮೇನಿಯ ಮುಂದಿನ ಉತ್ತರಾಧಿಕಾರಿಯಾಗುತ್ತಾರೆ ಎಂಬ ಪ್ರಶ್ನೆಗಳು ತಲೆಎತ್ತಿದ್ದವು. ಸದ್ಯ ಇದಕ್ಕೆ ಉತ್ತರ ಸಿಕ್ಕಿದ್ದು, ಖಮೇನಿ ಆಪ್ತನಾಗಿದ್ದ ಅಯತೊಲ್ಲಾ ಅಲಿರೆಜಾ ಅರಾಫಿ ಇರಾನ್‌ ನ ಮಧ್ಯಂತರ ಸುಪ್ರೀಂ ಲೀಡರ್‌ ಆಗಿದ್ದಾರೆ.

ಸದ್ಯ ಖಮೇನಿ ಯುಗ ಅಂತ್ಯವಾಗಿದ್ದು, ಇರಾನ್‌ ನ ಮಧ್ಯಂತರ ಸುಪ್ರೀಂ ಲೀಡರ್‌ ಆಗಿ ಇರಾನ್‌ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ ಅವರು ಆಯ್ಕೆಯಾಗಿದ್ದಾರೆ. ಈ ಮೂಲಕ ಇರಾನ್‌ ಇರಾನ್ ತನ್ನ ಸಂವಿಧಾನದ 111 ನೇ ವಿಧಿಯನ್ನು ಅಧಿಕೃತವಾಗಿ ಜಾರಿಗೆ ತಂದಿದ್ದು, ಇದರನ್ವಯ, ದೇಶದಲ್ಲಿ ಇದ್ದಕ್ಕಿದ್ದಂತೆ ಸರ್ವೋಚ್ಚ ನಾಯಕನ ಕೊರತೆ ಉಂಟಾದರೆ, ಶಾಶ್ವತ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೆ ಎಲ್ಲಾ ಸಂಪೂರ್ಣ ನಾಯಕತ್ವದ ಕರ್ತವ್ಯಗಳನ್ನು ವಹಿಸಿಕೊಳ್ಳಲು ತಾತ್ಕಾಲಿಕ ಮೂವರು ವ್ಯಕ್ತಿಗಳ ಮಂಡಳಿಯನ್ನು ರಚಿಸಬೇಕು ಎಂದು ಈ ಕಾನೂನು ಆದೇಶಿಸುತ್ತದೆ.

ಈ ನಿಯಮದ ಪ್ರಕಾರ, ಇರಾನ್‌ ಸಂವಿಧಾನಿಕ ಪ್ರಕ್ರಿಯೆಯ ಅಡಿಯಲ್ಲಿ ಆಯ್ಕೆ ಮಾಡಿ ಅವರಿಗೆ ಈ ಇರಾನ್‌ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲು ತಾತ್ಕಾಲಿಕ ನ್ಯಾಯಮಂಡಳಿಯನ್ನು ನೇಮಿಸಿದ್ದು, ಇದರ ಮುಖ್ಯ ನ್ಯಾಯಶಾಸ್ತ್ರಜ್ಞ ಸದಸ್ಯರಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ಕಾರ್ಯನಿರ್ವಹಿಸಲಿದ್ದಾರೆ. ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ಮುಖ್ಯ ನ್ಯಾಯಮೂರ್ತಿ ಘೋಲಮ್‌ಹೊಸೇನ್ ಮೊಹ್ಸೆನಿ ಎಜೆಯ್ ಸಹ ಮಂಡಳಿಯಲ್ಲಿದ್ದಾರೆ.

ಯಾರೀ ಅಲಿರೆಜಾ ಅರಾಫಿ ?
ಅಯತೊಲ್ಲಾ ಅಲಿರೆಜಾ ಅರಾಫಿ 1959 ರಲ್ಲಿ ಜನಿಸಿದ ಈತನಿಗೀಗ 67 ವರ್ಷ. ಅಲಿರೆಜಾ ಅರಾಫಿ ಇರಾನ್‌ನ ಧಾರ್ಮಿಕ ಸ್ಥಾಪನೆಯಲ್ಲಿ ಪ್ರಮುಖರಾಗಿದ್ದು, ಮಧ್ಯಂತರ ಸುಪ್ರೀಂ ಲೀಡರ್‌ ಆಗುವುದಕ್ಕೂ ಮುನ್ನ ಇರಾನ್‌ ಸರ್ಕಾರದಲ್ಲಿ ಇರಾನ್‌ನ ರಾಷ್ಟ್ರವ್ಯಾಪಿ ಇಸ್ಲಾಮಿಕ್ ಸೆಮಿನರಿ ವ್ಯವಸ್ಥೆಯ ನಿರ್ದೇಶಕರು, ಪ್ರಬಲ ಗಾರ್ಡಿಯನ್ ಕೌನ್ಸಿಲ್‌ನ ಪರಿಶೀಲನಾ ಸದಸ್ಯರು ಮತ್ತು ತಜ್ಞರ ಸಭೆಯ ಹಾಲಿ ಸದಸ್ಯರು ಹೀಗೆ ಏಕಕಾಲಕ್ಕೆ 3 ಅತ್ಯಂತ ಶಕ್ತಿಯುತ ಹುದ್ದೆಯಲ್ಲಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !