ಹೊಸದಿಗಂತ ವರದಿ,ಬಳ್ಳಾರಿ:
ಚುನಾವಣೆ ಹಿನ್ನೆಲೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ 18 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ, ಅದರಲ್ಲಿ ಅಂತರಾಜ್ಯ ಗಡಿ 11, ಇಂಟರ್ ಡಿಸ್ಟೀಕ್ 5 ಸೇರಿ ಒಟ್ಟು ನಾನಾ ಕಡೆ 18 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಹದ್ದಿನ ಕಣ್ಣಿಡಲಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಹೇಳಿದರು. ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಬಹುತೇಕ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ, ಕಳೆದ ಎರಡು ವಾರಗಳಿಂದ ಸಿದ್ದತೆ ನಡೆದಿದ್ದು, 19ಪ್ರಕರಣಗಳು ದಾಖಲಾಗಿವೆ, ದಾಖಲೆ ರಹಿತ ಸುಮಾರು 6 ಲಕ್ಷ ನಗದು ಹಣ, 3 ಸಾವಿರ ಸೀರೆಗಳನ್ನು ವಶಕ್ಕೆ ತೆಗದುಕೊಳ್ಳಲಾಗಿದೆ. ಕಳೆದ ಜನೆವರಿ ತಿಂಗಳಿಂದ ಇಲ್ಲಿವರೆಗೆ 5 ಕೇಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದು, ಇದಕ್ಕೆ ಸಂಬಂಧಿಸಿದ 9 ಪ್ರಕರಣಗಳು ದಾಖಲಾಗಿವೆ. ಅಕ್ರಮ ಮಧ್ಯ ಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 4ಲಕ್ಷ ರೂ.ಬೆಲೆ ಬಾಳುವ 6 ನೂರು ಲೀಟರ್ ಮಧ್ಯವನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳನ್ನು ವಶಕ್ಕೆ ಪಡೆಯಬೇಕಿದೆ. ಜಿಲ್ಲೆಯಲ್ಲಿ ಒಟ್ಟು 769 ರೌಡೀ ಶೀಟರ್ ಗಳಿದ್ದು, ಅದರಲ್ಲಿ 589 ಜನ ರೌಡಿ ಶೀಟರ್ ಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ. 5ಜನರನ್ನು ಗಡಿಪಾರು ಮಾಡಲಾಗಿದೆ. ಒಬ್ಬರ ಮೇಲೆ ಗೂಡಾ ಆ್ಯಕ್ಟ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ದೌರ್ಜನ್ಯ, ಜನರಲ್ಲಿ ಭಯ ಹುಟ್ಟಿಸುವ, ದಬ್ಬಾಳಿಕೆ ಮಾಡುವ 210 ಜನರನ್ನು ಗುರುತಿಸಲಾಗಿದ್ದು, ಅದರಲ್ಲಿ 87ಜನರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಸ್ಥಳಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ರೂಪನಗುಡಿ ಚೆಕ್ ಪೋಸ್ಟ್ ನಲ್ಲಿ ಮಾನಿಟರಿಂಗ್ ಇನ್ನಷ್ಟು ಗಟ್ಟಿಗೊಳಿಸಲಾಗುವುದು, ಅದಕ್ಕಿಂತ ರಾಯಪೂರ ಬಳಿ ಚೆಕ್ ಪೋಸ್ಟ್ ನಿರ್ಮಿಸಿ ಎನ್ನುವ ಬೇಡಿಕೆಗಳಿವೆ, ಈ ಕುರಿತು ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ನಗರದಲ್ಲಿ 2200 ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ, ಇವು ಯಾವ ಪಕ್ಷಕ್ಕೆ ಸೇರಿದ್ದು ಎನ್ನುವ ಕುರಿತು ತನಿಖೆ ನಡೆದಿದೆ ಎಂದರು. ಸಿಎಆರ್ ಪೋರ್ಟರ್ ನ್ನು ಪ್ರಾರಂಭಿಸಲಾಗಿದೆ, ಮೊಬೈಲ್ ಕಳ್ಳತನ ವಾದಾಗ ಈ ಆ್ಯಪ್ ನಲ್ಲಿ ಐಎಂಎ ಸಂಖ್ಯೆ ನಮೂದಿಸಬಹುದು. ಕೂಡಲೇ ಕಳೆದ ಹೋದ ಮೊಬೈಲ್ ಬ್ಲಾಕ್ ಆಗಲಿದೆ, ನಂತರ ಇದರ ಲೊಕೇಶ್ ನ್ನು ಬರಲಿದ್ದು, ತಪ್ಪಿ ತಪ್ಪಿತಸ್ಥರನ್ನು ಸುಲಭ ಪತ್ತೆ ಹಚ್ಚಬಹುದು. ನಾಗರಿಕರು ಇದರ ಸೌಲಭ್ಯವನ್ನು ಪಡೆಯಬಹುದು ಎಂದರು.