ವಾಸ್ತುಶಾಸ್ತ್ರದಲ್ಲಿ ಹಲವಾರು ಸಮಸ್ಯೆಗಳಿಗೆ ಪರಿಹಾರ ಇದೆ. ಆರೋಗ್ಯ ಸಮಸ್ಯೆ ಇರಬಹುದು, ಆರ್ಥಿಕ ಬಿಕ್ಕಟ್ಟು ಇರಬಹುದು ಯಾವುದೇ ಆದ್ರೂ ಮನುಷ್ಯ ಅದ್ರಿಂದ ಜರ್ಜರಿತನಾಗುತ್ತಾನೆ. ಇಂತಹ ಸಮಸ್ಯೆಗಳನ್ನ ತಪ್ಪಿಸಲು ವಸ್ತು ವಾಸ್ತುಶಾಸ್ತ್ರದಲ್ಲಿ ಪರಿಹಾರಗಳಿವೆ.
ಬೆಳ್ಳಿ ಆನೆ: ನಿಮ್ಮ ಮನೆಯಲ್ಲಿ ಬೆಳ್ಳಿ ಆನೆಯ ಪ್ರತಿಮೆಯನ್ನ ಇಡೋದು ತುಂಬಾ ಪ್ರಯೋಜನಕಾರಿ ಅಂತ ವಾಸ್ತು ಶಾಸ್ತ್ರ ಹೇಳುತ್ತೆ. ಆನೆಯನ್ನು ಶಕ್ತಿ, ಸಮೃದ್ಧಿಯ ಸಂಕೇತ ಅಂತ ಪರಿಗಣಿಸಲಾಗುತ್ತೆ. ಬೆಳ್ಳಿ ಆನೆಯ ಪ್ರತಿಮೆಯು ರಾಹುವನ್ನು ಸ್ವಾಗತಿಸುತ್ತದೆ. ಮೂಲಕ ಸಂಪತ್ತು ವೃದ್ಧಿಯಾಗುತ್ತದೆ.
ಮೀನಿನ ಪ್ರತಿಮೆ: ಇದು ಆರೋಗ್ಯ, ಶಕ್ತಿ, ಸಂಪತ್ತು ಮತ್ತು ಸಂತೋಷದ ಸಂಕೇತವಾಗಿದೆ. ಬೆಳ್ಳಿ ಅಥವಾ ಹಿತ್ತಾಳೆಯ ಮೀನಿನ ಪ್ರತಿಮೆಯನ್ನು ಖರೀದಿಸಿ ನಿಮ್ಮ ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಲೋಹದ ಮೀನಿನ ಪ್ರತಿಮೆಯನ್ನು ಕೊಂಡುಕೊಳ್ಳಲು ಸಾಧ್ಯವಾಗದಿದ್ದರೆ, ಒಂದು ಜೋಡಿ ಮೀನಿನ ವರ್ಣಚಿತ್ರವನ್ನು ಖರೀದಿಸಿ ಮನೆಯಲ್ಲಿ ಇರಿಸಿಕೊಳ್ಳಬಹುದು.
ಒಂದು ಕಣ್ಣಿನ ತೆಂಗಿನಕಾಯಿ: ಇದು ಸಿಗುವುದು ಅಪರೂಪ. ವಾಸ್ತು ಶಾಸ್ತ್ರದ ಪ್ರಕಾರ, ಈ ಒಂದು ಕಣ್ಣಿನ ತೆಂಗಿನಕಾಯಿಯನ್ನು ನಿಮ್ಮ ಮನೆಯಲ್ಲಿ ಇಟ್ಟರೆ, ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಕೊಳಲು: ಕೊಳಲು ಸಂಪತ್ತನ್ನು ಆಕರ್ಷಿಸುತ್ತದೆ. ಆದ್ದರಿಂದ ಮನೆಯಲ್ಲಿ ಕೊಳಲನ್ನು ಇಡುವುದರಿಂದ ಸಂತೋಷ ಮತ್ತು ಸಂಪತ್ತು ಹೆಚ್ಚಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನಿಮ್ಮ ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಕೊಳಲನ್ನು ಇರಿಸಿ.