ಚಿನ್ನ, ಬೆಳ್ಳಿ, ಮನೆ, ವಾಹನ ಖರೀದಿಸುವಾಗ ‘ಶುಭ ದಿನ’ ನೋಡೋದು ಸಾಮಾನ್ಯ. ಆದರೆ ಹೊಸ ಬಟ್ಟೆ ಖರೀದಿಗೂ ಶುಭ ದಿನವಿರಬೇಕು ಅಂತಾ ನಿಮಗೆ ಗೊತ್ತಿದ್ಯಾ? ಈ ಪ್ರಶ್ನೆ ಕೇಳಿದರೆ ಬಹುತೇಕ ಜನ “ಅದಕ್ಕೂ ಒಳ್ಳೆ ದಿನ ಇರುತ್ತಾ?” ಅನ್ನಬಹುದು. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬಟ್ಟೆ ಖರೀದಿ ಕೂಡಾ ಶಕ್ತಿಯ ಅನುಗ್ರಹ ಪಡೆಯುವ ಒಂದು ವಿಧಾನ. ಹೌದು, ಹೊಸ ಬಟ್ಟೆ ಖರೀದಿಯೂ ಕೆಲ ದಿನಗಳಲ್ಲಿ ಹೆಚ್ಚು ಲಾಭವನ್ನು ತರಬಹುದು ಅಂತ ತಜ್ಞರ ಅಭಿಪ್ರಾಯ.
ಹಿಂದೂ ಪಂಚಾಂಗದ ಪ್ರಕಾರ, ದ್ವಿತೀಯಾ, ತೃತೀಯಾ, ಪಂಚಮಿ, ಸಪ್ತಮಿ, ದಶಮಿ, ಏಕಾದಶಿ, ತ್ರಯೋದಶಿ ಹಾಗೂ ಹುಣ್ಣಿಮೆ — ಇವುಗಳನ್ನ ಅತ್ಯಂತ ಶುಭತಿಥಿಗಳೆಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಬಟ್ಟೆ ಖರೀದಿಯ ಜೊತೆಗೆ ಅವು ಧರಿಸುವುದು ಕೂಡ ಶಕ್ತಿಕಾರಕ. ಅಷ್ಟೇ ಅಲ್ಲ, ವಾರದ ದಿನಗಳಲ್ಲಿ ಸೋಮವಾರ (ಚಂದ್ರ), ಬುಧವಾರ (ಬುಧ), ಗುರುವಾರ (ಗುರು) ಮತ್ತು ಶುಕ್ರವಾರ (ಶುಕ್ರ)ಗಳು ಬಟ್ಟೆ ಖರೀದಿಗೆ ಅತ್ಯಂತ ಅನುಕೂಲಕರವೆಂದು ಹೇಳಲಾಗಿದೆ.
ಇದಕ್ಕಂತೆಯೇ, ರಿಕ್ತ ತಿಥಿಗಳು (ಚತುರ್ಥಿ, ನವಮಿ, ಚತುರ್ದಶಿ), ಅಮಾವಾಸ್ಯೆ, ಶನಿವಾರ ಮತ್ತು ಕೆಲವೊಮ್ಮೆ ಮಂಗಳವಾರಗಳಲ್ಲಿ ಹೊಸ ಬಟ್ಟೆ ಖರೀದಿಸಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಈ ದಿನಗಳಲ್ಲಿ ಖರೀದಿಸಿದ ಬಟ್ಟೆಗಳು ಉತ್ತಮವಲ್ಲ, ಕೆಲವೊಮ್ಮೆ ದುರ್ಘಟನೆಗಳ ಸೂಚನೆಯನ್ನೂ ಕೊಡಬಹುದು ಎಂದು ನಂಬಲಾಗಿದೆ.
ಅಂತೆಯೇ ಮುಂದೆ ಮದುವೆ, ಹಬ್ಬ, ವಿಶೇಷ ಸಂದರ್ಭದಲ್ಲಿ ಬಟ್ಟೆ ಖರೀದಿ ಮಾಡಲು ಹೊರಟಾಗ, ಈ ದಿನಾಂಕಗಳನ್ನ ಗಮನದಲ್ಲಿ ಇಟ್ಟುಕೊಂಡು ಖರೀದಿ ಮಾಡಿದ್ರೆ, ಅದೃಷ್ಟದ ಬಾಗಿಲು ತೆರೆದು ಬಿಡಬಹುದು!