ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಗನಯಾತ್ರಿ ಶುಭಾಂಶು ಶುಕ್ಲಾ ಭಾನುವಾರ ಆಕ್ಸಿಯಂ ಸ್ಪೇಸ್ ಮಿಷನ್ ಬಳಿಕ ಮೊದಲ ಬಾರಿಗೆ ತವರು ನೆಲ ಭಾರತಕ್ಕೆ ಮರಳಿದ್ದಾರೆ.
ಈ ವೇಳೆ ಪ್ರಧಾನಿ ಮೋದಿಯನ್ನು ಭೇಟಿಯಾಗಲಿದ್ದಾರೆ. ನಂತರ ತಮ್ಮ ತವರೂರಾದ ಉತ್ತರ ಪ್ರದೇಶದ ಲಖನೌಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೀಗ ಶುಭಾಂಶು ಶುಕ್ಲಾ ಅವರು ವಿಮಾನದಲ್ಲಿ ಕುಳಿತಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಈ ಪೋಸ್ಟ್ನಲ್ಲಿ ಅವರು, ನಾನು ಭಾರತಕ್ಕೆ ಹಿಂತಿರುಗಲು ವಿಮಾನದಲ್ಲಿ ಕುಳಿತಾಗ, ನನ್ನ ಹೃದಯದಲ್ಲಿ ಮಿಶ್ರ ಭಾವನೆ ಉಂಟಾಗಿದೆ. ಕಳೆದ ಒಂದು ವರ್ಷದಿಂದ ಈ ಕಾರ್ಯಾಚರಣೆಯ ಸಮಯದಲ್ಲಿ ನನ್ನ ಸ್ನೇಹಿತರು ಮತ್ತು ಕುಟುಂಬವಾಗಿದ್ದ ಅದ್ಭುತ ಜನರನ್ನು ಬಿಟ್ಟು ಹೋಗುವುದು ನನಗೆ ದುಃಖ ತಂದಿದೆ. ಹಾಗೆಯೇ ಕಾರ್ಯಾಚರಣೆಯ ನಂತರ ಮೊದಲ ಬಾರಿಗೆ ನನ್ನ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ದೇಶದ ಪ್ರತಿಯೊಬ್ಬರನ್ನು ಭೇಟಿಯಾಗಲು ತುಂಬಾ ಉತ್ಸುಕನಾಗಿದ್ದೇನೆ. ಜೀವನ ಎಂದರೆ ಇದೇ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.