September 17, 2026
Thursday, September 17, 2026
spot_img

ಫೋನ್‌ ಹುಚ್ಚು ಬಿಡಿಸುವ ಯತ್ನ! ರಾಜ್ಯದ ಎಲ್ಲಾ ಶಾಲೆಗಳಲ್ಲಿ ʼಮೊಬೈಲ್‌ ಬಿಡಿ-ಪುಸ್ತಕ ಹಿಡಿʼ ಅಭಿಯಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳ ಅತಿಯಾದ ಮೊಬೈಲ್‌ ಅಡಿಕ್ಷನ್‌ಗೆ ಕಡಿವಾಣ ಹಾಕುವ ಅವಶ್ಯಕತೆ ಇದೆ. ಶಾಲೆಯಲ್ಲಿದ್ದಷ್ಟು ಸಮಯ ಮಾತ್ರ ಮಕ್ಕಳು ಮೊಬೈಲ್‌ನಿಂದ ದೂರ ಇರುತ್ತಾರೆ. ಆದರೆ ಮನೆಗೆ ಬಂದ ತಕ್ಷಣವೇ ಮೊಬೈಲ್‌ಗೆ ದಾಸರಾಗುತ್ತಾರೆ.

ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಎಲ್ಲ ಶಾಲೆಗಳಲ್ಲಿ ಮೊಬೈಲ್‌ ಬಿಡಿ ಪುಸ್ತಕ ಹಿಡಿ ಅಭಿಯಾನವನ್ನು ಆರಂಭಿಸಿದೆ.

ಮಕ್ಕಳಿಗೆ ಓದಿನ ಬಗ್ಗೆ ಆಸಕ್ತಿ ಮೂಡಿಸುವಮ ಕ್ರಿಯಾಶೀಲರನ್ನಾಗಿ ಮಾಡುವ ಉದ್ದೇಶ ಈ ಅಭಿಯಾನದ್ದು. ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಓದುವ ಅಭ್ಯಾಸವನ್ನು ಪುನಶ್ಚತನಗೊಳಿಸುವ ಮೂಲಕ ಜ್ಞಾನವೃದ್ಧಿಗೆ ಪೂರಕವಾದ ಕಲಿಕಾ ವಾತಾವರಣವನ್ನು ನಿರ್ಮಿಸಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸವನ್ನು ಸಾಧಿಸುವ ಉದ್ದೇಶದಿಂದ ಮೊಬೈಲ್ ಬಿಡಿ – ಪುಸ್ತಕ ಹಿಡಿ ಅಭಿಯಾನವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

ಶಾಲೆಯಲ್ಲಿ ಶಿಕ್ಷಕರು ಮಕ್ಕಳು ಯಾವೆಲ್ಲ ಕಾರಣಕ್ಕೆ ಮೊಬೈಲ್‌ ಬಳಸುತ್ತಾರೆ, ಕಡಿಮೆ ಮಾಡುವುದು ಹೇಗೆ? ಊಟದ ಸಮಯದಲ್ಲಿ ಮೊಬೈಲ್‌ ಮುಟ್ಟದಂತೆ ಹೇಳಿಕೊಡೋದು, ಓದುವುದು ಹಾಗೂ ಇನ್ನಿತರ ಆಟ ಆಡುವುದರಲ್ಲಿ ಆಸಕ್ತಿ ಬೆಳೆಸಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !