ಹೊಸದಿಗಂತ ಡಿಜಿಟಲ್ ಡೆಸ್ಕ್:
ತಡರಾತ್ರಿ ಹಡಗು ಮುಳುಗಿ 15 ಪ್ರಯಾಣಿಕರು ಸಾವನ್ನಪ್ಪಿದ್ದು, 19 ಮಂದಿ ನಾಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಆಗ್ನೇಯ ಸುಲವೇಸಿ ಪ್ರಾಂತ್ಯದ ರಾಜಧಾನಿ ಕೆಂಡಾರಿಯ ದಕ್ಷಿಣಕ್ಕೆ 200 ಕಿಲೋಮೀಟರ್ ದೂರದಲ್ಲಿರುವ ಮುನಾ ದ್ವೀಪದ ಕೊಲ್ಲಿಯ ಮೂಲಕ ಹಡಗು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಹಡಗಿನಲ್ಲಿ ಒಟ್ಟು 40 ಪ್ರಯಾಣಿಕರಿದ್ದು, ಅವರಲ್ಲಿ ಆರು ಮಂದಿ ಜೀವಂತವಾಗಿದ್ದಾರೆಂದು ಇಂಡೋನೇಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿಯ ಸಮಯದಲ್ಲಿ ಹಡಗು ಮುಳುಗಲು ಕಾರಣ ಇನ್ನೂ ತಿಳಿದಿಲ್ಲ. ಬದುಕುಳಿದವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಪತ್ತೆಯಾದವರಿಗಾಗಿ ಹುಡುಕಾಟ ಶುರವಾಗಿದೆ.
ಮೃತದೇಹಗಳನ್ನು ಗುರುತಿಸಿ ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಇಂಡೋನೇಷ್ಯಾದಲ್ಲಿ 17,000 ಕ್ಕೂ ಹೆಚ್ಚು ದ್ವೀಪಗಳಿದ್ದದು, ದೋಣಿ ದುರಂತಗಳು ಸಾಮಾನ್ಯವಾಗಿವೆ. ಸಮುದ್ರ ಪ್ರಯಾಣದಲ್ಲಿ ಸುರಕ್ಷತಾ ಮಾನದಂಡಗಳ ಉಲ್ಲಂಘನೆಯಿಂದಾಗಿ, ಜೀವ ಉಳಿಸುವ ಉಪಕರಣಗಳಿಲ್ಲದೆ ಹಡಗುಗಳು ಓವರ್ಲೋಡ್ ಆಗಿವೆ. ಇದು ಇಂಡೋನೇಷ್ಯಾದಲ್ಲಿ ಆಗಾಗ್ಗೆ ಅಪಘಾತಗಳಿಗೆ ಕಾರಣವಾಗುತ್ತದೆ.