ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೂರ್ವ ನೇಪಾಳದ ನಾಲ್ಕು ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, 5 ಜನರು ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೊಶಿ ಪ್ರಾಂತೀಯ ಜಿಲ್ಲಾ ಪೋಲೀಸರ ಪ್ರಕಾರ, ನೇಪಾಳದ ಸಂಖುವಾಸಭಾ, ತಪ್ಲೆಜಂಗ್, ಪಂಚತಾರ್ ಮತ್ತು ಧಂಕುತ ಜಿಲ್ಲೆಗಳಲ್ಲಿ ರಾತ್ರಿಯ ಭಾರೀ ಮಳೆಯ ಪರಿಣಾಮವಾಗಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ.
“ಪಂಚತಾರ್‌ನಲ್ಲಿ ಇಬ್ಬರು, ಸಂಖುವಸಭಾ, ತಾಪ್ಲೆಜಂಗ್ ಮತ್ತು ಧನಕುಟಾ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ” ಎಂದು ಪ್ರಾಂತೀಯ ಜಿಲ್ಲಾ ಪೊಲೀಸ್ ದಾಖಲೆ ಹೇಳಿದೆ. ಶನಿವಾರ ರಾತ್ರಿಯಿಂದ ಸಂಖುವಸಭಾದಲ್ಲಿ 21 ಜನರು ನಾಪತ್ತೆಯಾಗಿದ್ದಾರೆ. ಪಂಚತಾರ್‌ನಲ್ಲಿ 4 ಮತ್ತು ತಪ್ಲೆಜಂಗ್ ಜಿಲ್ಲೆಯಲ್ಲಿ 3 ಮಂದಿ ಕಾಣೆಯಾಗಿದ್ದಾರೆ ಎಂದು ಪ್ರಾಂತೀಯ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಜಿಲ್ಲೆಗಳಲ್ಲಿ ಪ್ರಸ್ತುತ ಶೋಧ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಸಚಿವರು ಸಂಸತ್ತಿಗೆ ತಿಳಿಸಿದರು. ನಾಪತ್ತೆಯಾದವರು ಮತ್ತು ಆ ಜಿಲ್ಲೆಗಳಲ್ಲಿ ದುರಂತದಲ್ಲಿ ತತ್ತರಿಸಿರುವವರಿಗಾಗಿ ಹುಡುಕಾಟ ಜೊತೆಗೆ ರಕ್ಷಣೆಗಾಗಿ ಸರ್ಕಾರವು ಕಾರ್ಯಗಳನ್ನು ನಡೆಸುತ್ತಿದೆ. ಆ ಪ್ರದೇಶಗಳಲ್ಲಿ, ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ, ನೇಪಾಳ ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳು ಹುಡುಕಾಟದಲ್ಲಿ ತೊಡಗಿದ್ದಾರೆ.