ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ರಿಕ್ತ ಗುಂಪೊಂದು ಅಹ್ಮದಿ ಮುಸಲ್ಮಾನರ ಧಾರ್ಮಿಕ ಕೇಂದ್ರದ ಮೇಲೆ ದಾಳಿ ನಡೆಸಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು ಹಲವು ಜನ ಗಾಯಗೊಂಡ ಘಟನೆ ಕರಾಚಿಯಲ್ಲಿ ನಡೆದಿದೆ.
ಕರಾಚಿಯ ಹೊರವಲಯದ ಸಫ್ದಾರ್ ಎಂಬಲ್ಲಿನ ಅಹ್ಮದಿ ಮುಸಲ್ಮಾನರ ಧಾರ್ಮಿಕ ಕೇಂದ್ರದ ಮೇಲೆ ಸುಮಾರು 200 ಜನ ಉದ್ರಿಕ್ತರು ಇಟ್ಟಿಗೆ ಮತ್ತು ಬಡಿಗೆಗಳಿಂದ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದಲ್ಲಿ ಅಹ್ಮದೀಯರು ಅಲ್ಪಸಂಖ್ಯಾತ ಗುಂಪಾಗಿದ್ದು, ಕೆಲವು ಸಾಂಪ್ರದಾಯಿಕ ಮುಸ್ಲಿಮರು ಅವರನ್ನು ಧರ್ಮದ್ರೋಹಿಗಳು ಎಂದು ಪರಿಗಣಿಸುತ್ತಾರೆ. ಪಾಕಿಸ್ತಾನ ಕಾನೂನು ಸಹ ಅಹ್ಮದೀಯರು ತಮ್ಮನ್ನು ತಾವು ಮುಸ್ಲಿಂ ಎಂದು ಕರೆದುಕೊಳ್ಳುವುದನ್ನು ನಿರ್ಬಂಧಿಸಿದೆ. ಹಾಗೂ ಇಸ್ಲಾಮಿಕ್ ಚಿಹ್ನೆಗಳನ್ನು ಬಳಸುವುದನ್ನು ತಡೆದಿದೆ.