ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಬಿಟಿಎಂ ಲೇಔಟ್‌ನ ಎರಡನೇ ಹಂತದಲ್ಲಿರುವ ಗ್ಯಾಸ್ ಫಿಲ್ಲಿಂಗ್ ಅಡ್ಡೆ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, 750 ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಲೈಸೆನ್ಸ್ ಇಲ್ಲದ ಅನಧಿಕೃತವಾದ ಖಾಲಿ ನಿವೇಶನದಲ್ಲಿ ಶೆಡ್ ಹಾಕಿಕೊಂಡಿದ್ದು, ಕಳ್ಳತನ ಮಾಡಿ ತಂದ ಸಿಲಿಂಡರ್‌ಗಳಿಗೆ ಜ್ಯೋತಿ, ಗೋ ಗ್ಯಾಸ್ ಏಜೆನ್ಸಿಗಳು ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದರು. ಖಚಿತ ಮಾಹಿತಿ ಅರಿತ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದು, 750 ಕ್ಕೂ ಅಧಿಕ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಸರ್ಕಾರಿ ಸ್ವಾಮ್ಯದ ವಿವಿಧ ಕಂಪನಿಯ 75 ಸಿಲಿಂಡರ್, ಗೋಗ್ಯಾಸ್, ಜ್ಯೋತಿ ಸೇರಿದಂತೆ ಇತರೆ ಕಂಪನಿಯ 694ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಜತೆಗೆ 35 ಲಕ್ಷ ರೂ. ಮೌಲ್ಯದ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ.