ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ತಮ್ಮ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಆಪ್ ಶಾಸಕ ಮೆಹ್ರಾಜ್ ಮಲಿಕ್ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
“ಆಮ್ ಆದ್ಮಿ ಪಕ್ಷದ ಶಾಸಕ ಮೆಹ್ರಾಜ್ ಮಲಿಕ್ ಮೇಲಿನ ಬಿಜೆಪಿಯ ದಾಳಿ ಅತ್ಯಂತ ಖಂಡನೀಯ. ಇದು ಬಿಜೆಪಿಯ ಹತಾಶೆಯನ್ನು ತೋರಿಸುತ್ತದೆ. ಮೆಹ್ರಾಜ್ ಮಲಿಕ್ ಸಾರ್ವಜನಿಕರ ಪ್ರಶ್ನೆಗಳನ್ನು ಮಾತ್ರ ಎತ್ತುತ್ತಿದ್ದರು. ಬಿಜೆಪಿ ಸಾರ್ವಜನಿಕರ ಧ್ವನಿಯನ್ನು ತಡೆಯಲು ಸಾಧ್ಯವಿಲ್ಲ.” ಎಂದು ಕಿಡಿಕಾರಿದ್ದಾರೆ.
“ಇಡೀ ದೇಶದಲ್ಲಿ ಬಿಜೆಪಿ ನಾಯಕರು ಗೂಂಡಾಗಿರಿಗೆ ಒಲವು ತೋರುತ್ತಿದ್ದಾರೆ. ಮೆಹ್ರಾಜ್ ಮಲಿಕ್ ಒಬ್ಬನೇ ಆಪ್ ಶಾಸಕ ಎಂದು ಭಾವಿಸಬೇಡಿ. ಬಿಜೆಪಿ ಗೂಂಡಾಗಳ ವಿರುದ್ಧ ಹೋರಾಡಲು ಅವರೊಬ್ಬರೇ ಸಾಕು.” ಎಂದು ಎಎಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.