ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ನ ಶಿವಸೇನಾ ನಾಯಕ ಸಂದೀಪ್ ಥಾಪರ್ ಅಲಿಯಾಸ್ ಗೋರಾ(58) ಅವರು ಶುಕ್ರವಾರ ಮಧ್ಯಾಹ್ನ ಲುಧಿಯಾನ ಸಿವಿಲ್ ಆಸ್ಪತ್ರೆಯ ಹೊರಗಿನ ಜನನಿಬಿಡ ರಸ್ತೆಯಲ್ಲಿ ತನ್ನ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ನಾಲ್ವರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ.
ಆಸ್ಪತ್ರೆಯಿಂದ ಥಾಪರ್ ಹೊರಬರುತ್ತಿದ್ದಂತೆ ಕಾಲ್ನಡಿಗೆಯಲ್ಲಿ ಹಿಂಬಾಲಿಸಿದ್ದಾನೆ. ಆಗ ದಾಳಿಕೋರರಲ್ಲಿ ಒಬ್ಬ ಕತ್ತಿಯಿಂದ ಥಾಪರ್ ತಲೆಯ ಮೇಲೆ ಪದೇ ಪದೇ ಹೊಡೆಯಲು ಪ್ರಾರಂಭಿಸಿದ್ದು, ಥಾಪರ್ ಕೈ ಜೋಡಿಸಿ ಬಿಟ್ಟು ಬಿಡಿ ಎಂದು ಬೇಡಿಕೊಳ್ಳುತ್ತಾರೆ. ಆದರೆ ಅವನು ನಿಲ್ಲಿಸುವುದಿಲ್ಲ. ಮತ್ತೊಬ್ಬ ನಿಹಾಂಗ್ ಸಹ ಕತ್ತಿಯಿಂದ ದಾಳಿ ಮುಂದುವರಿಸಿದಾಗ ಥಾಪರ್ ಸ್ಕೂಟರ್ ಸಮೇತ ರಸ್ತೆಯಲ್ಲಿ ಬಿದ್ದಿದ್ದಾರೆ.ಆದ್ರೆ ಆಗ ಮಾರ್ಗದಲ್ಲಿ ಸಂಚರಿಸುತ್ತಿದ್ದವರು ಮತ್ತು ಪೊಲೀಸರು ಮೂಕಪ್ರೇಕ್ಷಕರಂತಿದ್ದರು ಎನ್ನಲಾಗಿದೆ. ಬಳಿಕ ದಾಳಿಕೋರ ಸ್ಕೂಟರ್ ಅನ್ನು ಎತ್ತಿಕೊಂಡು ತನ್ನ ಸಹಚರನೊಂದಿಗೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಟ್ರಸ್ಟ್‌ನ ಸಂಸ್ಥಾಪಕ-ಅಧ್ಯಕ್ಷ ರವೀಂದರ್ ಅರೋರಾ ಅವರ ನಾಲ್ಕನೇ ಪುಣ್ಯತಿಥಿಯ ಅಂಗವಾಗಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಥಾಪರ್ ಅವರು ಸಂವೇದನಾ ಟ್ರಸ್ಟ್ ಎಂಬ ಎನ್‌ಜಿಒ ಕಚೇರಿಯಿಂದ ಸಿವಿಲ್ ಆಸ್ಪತ್ರೆ ಬಳಿ ತೆರಳಿದ ನಂತರ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಗಂಭೀರವಾಗಿ ಗಾಯಗೊಂಡ ನಾಯಕನನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಂದ ಸ್ಥಳೀಯ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಯಿತು. ಅಪರಿಚಿತ ದಾಳಿಕೋರರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಜಸ್ಕಿರಂಜಿತ್ ಸಿಂಗ್ ತೇಜಾ ತಿಳಿಸಿದ್ದಾರೆ.
ಘಟನೆಯ ನಂತರ, ಶಿವಸೇನಾ ಪಂಜಾಬ್ ನಾಯಕರು ಸಿವಿಲ್ ಆಸ್ಪತ್ರೆಯ ಹೊರಗೆ ಜಮಾಯಿಸಿ ಪಂಜಾಬ್ ಸರ್ಕಾರ ಮತ್ತು ಪೊಲೀಸರ ವಿರುದ್ಧ ಘೋಷಣೆಗಳನ್ನು ಎತ್ತಿದರು. ಶಿವಸೇನಾ ಪಂಜಾಬ್‌ನ ಯುವ ಘಟಕದ ಅಧ್ಯಕ್ಷ ಸುಮಿತ್ ಅರೋರಾ, ಥಾಪರ್‌ಗೆ ಮೂವರು ಬಂದೂಕುಧಾರಿಗಳನ್ನು ಒದಗಿಸಲಾಗಿದೆ ಆದರೆ ಪೊಲೀಸರು ಒಂದು ವಾರದ ಹಿಂದೆ ಅವರ ಭದ್ರತೆಯನ್ನು ಹಿಂತೆಗೆದುಕೊಂಡರು. ನಂತರ, ಬಂದೂಕುಧಾರಿಯ ಸೇವೆಯನ್ನು ಪುನಃಸ್ಥಾಪಿಸಲಾಯಿತು. ಬಂದೂಕುಧಾರಿ ಆರೋಪಿಗಳು ಸುಲಭವಾಗಿ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಅರೋರಾ ಆರೋಪಿಸಿದ್ದಾರೆ.