ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಹಲ್ಲೆ: 25 ಜನರ ಬಂಧನ

ಹೊಸದಿಗಂತ ವರದಿ,ಹಾವೇರಿ:

ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಮಂಗಳವಾರ ತಡ ರಾತ್ರಿ ಆರ್‌ಎಸ್‌ಎಸ್‌ನ ನಾಲ್ಕು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಹಿನ್ನಲೆಯಲ್ಲಿ ರಟ್ಟಿಹಳ್ಳಿಯ ಅಂಜುಮನ್ ಇಸ್ಲಾಂನ ಅಧ್ಯಕ್ಷ ಸೇರಿ ೨೫ ಜನರನ್ನು ಬಂಧಿಸಲಾಗಿದೆ.
ಗುರುರಾಜ ಕುಲಕರ್ಣಿ, ಮಾಲತೇಶ ಬಾಲೇಹೊಸೂರ, ಮಾಂತೇಶ ಹಡಪದ ಹಾಗೂ ಚಂದ್ರಪ್ಪ ಕೊರಗರ ಎನ್ನುವವರೇ ಹಲ್ಲೆಗೆ ಒಳಗಾದವರಾದಿದ್ದಾರೆ.
ರಟ್ಟಿಹಳ್ಳಿ ಪಟ್ಟಣದಲ್ಲಿ ದಿ.೭ ರಿಂದ ೧೪ರವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಧಾರವಾಡ ವಿಭಾದದಿಂದ ಪ್ರಾಥಮಿಕ ಶಿಕ್ಷಾ ವರ್ಗ ನಡೆಯುತ್ತಿತ್ತು. ಇದರ ಸಮಾರೋಪ ಸಮಾರಂಭ ದಿ.೧೪ ರಂದು ಜರುಗಲಿತ್ತು. ಈ ಹಿನ್ನಲೆಯಲ್ಲಿ ಅಂದು ಪಟ್ಟಣದಲ್ಲಿ ಪಥ ಸಂಚಲನ ನಡೆಯಲಿತ್ತು. ಇದಕ್ಕಾಗಿ ಐದು ಜನ ಆರ್‌ಎಸ್‌ಎಸ್ ಕಾರ್ಯಕರ್ತರು ಮಂಗಳವಾರ ರಾತ್ರಿ ರೂಟ್ ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ಇವರ ಮೇಲೆ ಹಲ್ಲೆ ಮಾಡಲಾಗಿದೆ.
ಆರ್‌ಎಸ್‌ಎಸ್ ಕಾರ್ಯಕರ್ತರು ರೂಟ್ ನೋಡಲಿಕ್ಕೆ ತೆರಳಿದ ಸಂದರ್ಭದಲ್ಲಿ ಸಂಬೆಯೊಂದನ್ನು ಮುಗಿಸಿಕೊಂಡು ಬಂದು ಮುಸ್ಲೀಮ್ ಸಮುದಾಯದ ಒಂದು ಗುಂಪು ಇವರೊಂದಿ ವಿನಾಕಾರಣ ವಾದಕ್ಕೆ ಇಳಿದಿದೆ. ಮಾತಿಗೆ ಮಾತು ಬೆಳೆದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಬಡಿಗೆಗಳಿಂದ ಹಲ್ಲೆ ಮಾಡಿದೆ.
ಇದೇ ಸಂದರ್ಭದಲ್ಲಿ ಬೀಟ್ ಮೇಲಿದ್ದ ಪೊಲೀಸರು ಘಟನಾ ಸ್ಥಳಕ್ಕೆ ಬಂದ ಪರಿಣಾಮ ಹೆಚ್ಚಿನ ಅನಾಹುತ ಆಗುವುದನ್ನು ತಡೆದಿದ್ದಾರೆ. ಈ ಹಲ್ಲೆಯಲ್ಲಿ ಗುರುರಾಜ ಕುಲಕರ್ಣಿ ಎನ್ನುವವರ ತೆಲೆಗೆ ಬಲವಾದ ಪೆಟ್ಟು ಬಿದ್ದಿದೆ. ಇವರನ್ನು ತಕ್ಷಣ ರಟ್ಟಿಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹುಬ್ಬಳ್ಳಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ.ಹೆಚ್., ಎಎಸ್‌ಪಿ ವಿಜಯಕುಮಾರ ಸಂತೋಷ, ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!