Monday, September 22, 2025

ಗೋದಾಮಿನಲ್ಲಿಟ್ಟಿದ್ದ ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆಗೆ ಯತ್ನ: 50 ಕೆಜಿ ಮೂಟೆಗಳು ಜಪ್ತಿ


ಹೊಸದಿಗಂತ ಗಂಗಾವತಿ:

ಇಲ್ಲಿನ ಕನಕಗಿರಿ ರಸ್ತೆಯಲ್ಲಿರುವ ಆಹಾರ ಇಲಾಖೆಯ ಗೋದಾಮಿನಿಂದಲೇ ಪಡಿತರ ಅಕ್ಕಿಯನ್ನು ಕಾಳಸಂತೆಗೆ ಸಾಗಿಸಲು ಯತ್ನಿಸಿದ್ದ ಪ್ರಕರಣದಲ್ಲಿ ದಾಳಿ ನಡೆಸಿದ. ತಹಶೀಲ್ದಾರ ಹಾಗೂ ಆಹಾರ ಅಧಿಕಾರಿಗಳು ಲಾಲ್‌ರೈಸ್ ಹೆಸರಿನ 50 ಕೆಜಿ ಅಕ್ಕಿ ಪಾಕೇಟ್‌ಗಳನ್ನುವಶಕ್ಕೆ ಪಡೆದು
ಅಧಿಕಾರಿಗಳನ್ನು ಅಮಾನತ್ತುಗೊಳಿಸಿದ್ದಾರೆ.


ಗೋದಾಮಿನಲ್ಲಿ ಪಾಕೇಟ್‌ನಲ್ಲಿ ತುಂಬಿಸಿದ್ದ ಸುಮಾರು 600ಕ್ಕೂ ಹೆಚ್ಚು ಲಾಲ್ ರೈಸ್ಬ್ರಾಂಡಿನ ಅಕ್ಕಿಚೀಲವನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಈ ಪ್ರಕರಣ ಕುರಿತು ಗೋದಾಮಿನ
ಅಧಿಕಾರಿ ಸೋಮಶೇಖರ ಹಾಗೂ ರೈಸ್ ಮಿಲ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಅಕ್ರಮವಾಗಿ ಸರ್ಕಾರಿ ಗೋಡೌನ್‌ಗಳ ಮೂಲಕ ಅಕ್ರಮವಾಗಿ ಲಾಲ್‌ರೈಸ್ ಹೆಸರಿನ ಮೂಲಕ ದುಬೈಗೆ ಲೋಡ್ ಮಾಡುತ್ತಿದ್ದ ವಿಷಯವನ್ನು ಜನತೆಗೆ ತಿಳಿದು ತಹಶೀಲ್ದಾರ ಹಾಗೂ ಆಹಾರ ಅಧಿಕಾರಿಗಳಿಗೆ ವಿಷಯ ತಿಳಿಯುತ್ತಿದಂತೆ ದಾಳಿ ನಡೆಸಿ ವಶಕ್ಕೆ ಪಡೆದರು.

ಇದನ್ನೂ ಓದಿ