ಹೊಸದಿಗಂತ ವರದಿ, ಮೈಸೂರು:
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಅದನ್ನು ತಡೆಯಲು ಬಂದ ಆಕೆಯ ಪತಿಗೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಕಾಮುಕನನ್ನ ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನವೀನ್ ಬಂಧಿತ ಆರೋಪಿ. ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದ ಸಮೀಪವಿರುವ ತೋಟದ ಬಳಿ ಎರಡು ದಿನಗಳ ಹಿಂದೆ ನಡೆದಿತ್ತು.
ಮಹಿಳೆ ಮೇಲೆ ಕಾಮುಕ ದೃಷ್ಟಿ ಬೀರಿದ್ದ ನವೀನ್ ಕುಮಾರ್, ಆಕೆ ಪತಿ ಮನೆ ಒಳಗೆ ತೆರಳಿದ್ದ ವೇಳೆ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ.ಪತ್ನಿಯ ಚೀರಾಟ ಕೇಳಿ ಪತಿ ಓಡಿಬಂದು ರಕ್ಷಣೆಗೆ ಧಾವಿಸಿ ಆಕೆಯ ಪತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಹುಲ್ಲಹಳ್ಳಿ ಠಾಣೆ ಪೊಲೀಸರು ತಲೆಮರೆಯಿಸಿಕೊಂಡಿದ್ದ ಆರೋಪಿ ನವೀನ್‌ನನ್ನು ಪತ್ತೆ ಹಚ್ಚಿ ಬಂಧಿಸಿ, ಜೈಲಿಗೆ ಹಾಕಿದ್ದಾರೆ.