ಜಾನುವಾರಗಳ ಅಕ್ರಮ ಸಾಗಾಟಕ್ಕೆ ಯತ್ನ: ಆರೋಪಿಗಳ ಬಂಧನ

 ಹೊಸದಿಗಂತ ವರದಿ,ಮುಂಡಗೋಡ:

ಟಾಟಾಎಸ್ ವಾಹನದಲ್ಲಿ ಶನಿವಾರ ಅಕ್ರಮವಾಗಿ ಜಾನುವಾರಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಇಲ್ಲಿನ ಪೊಲೀಸರು ಜೊಗೇಶ್ವರ ಹಳ್ಳದ ಹತ್ತಿರ ದಾಳಿ ನಡೆಸಿ ವಾಹನ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

ಹಾನಗಲ್ ತಾಲೂಕಿನ ಹುಲತ್ತಿ ಗ್ರಾಮದ ಮಲ್ಲಿಕಜಾನ ಲಾಲಪಾಪಣ್ಣನವರ, ರಶೀದ ಲಾಲಪಾಪಣ್ಣನವರ ಮತ್ತು ಮಲ್ಲಿಕಜಾನ ಚಮನಸಾಬ ಬಂಧಿತ ಆರೋಪಿಗಳು.

ತಾಲೂಕಿನ ಬಂಡಿಗೇರ ಗ್ರಾಮದಿಂದ ಹಾನಗಲ್‌ಗೆ ಟಾಟಾಎಸ್ ವಾಹನದಲ್ಲಿ ಕಾನೂನು ಬಾಹೀರವಾಗಿ ಎರಡು ಆಕಳು, ಎರಡು ಹಸು ಮತ್ತು ಎರಡು ಎಮ್ಮೆಯನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದರು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಬೆನ್ನಟ್ಟಿ ಜೊಗೇಶ್ವರ ಹಳ್ಳದ ಹತ್ತಿರ ಜಾನುವಾರಗಳನ್ನು ರಕ್ಷಿಸಿ ವಾಹನ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಇಲ್ಲಿನ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಪಿಐ ರಂಗನಾಥ ನೀಲಮ್ಮನವರ ನಿರ್ದೇಶನದಂತೆ ಪಿಎಸೈ ಪರಶುರಾಮ ಎಂ ನೇತೃತ್ವದಲ್ಲಿ ಎಎಸೈ ರಾಜೇಶ ನಾಯ್ಕ ಹಾಗೂ ಸಿಬ್ಬಂದಿಗಳಾದ ಗಣಪತಿ ಹುನ್ನಳ್ಳಿ, ಕೊಟೇಶ ನಾಗರವಳ್ಳಿ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!