ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನು ಮುಂದೆ ಬೆಂಗಳೂರಿಗರು ಚೆನ್ನೈ, ಹೈದರಾಬಾದ್ ಗೆ ತೆರಳುವ ಬದಲು ಬೆಂಗಳೂರಿನಿಂದಲೇ ಅಮೆರಿಕ ವೀಸಾ ಪಡೆಯಬಹುದಾಗಿದೆ. ಬೆಂಗಳೂರಿನಲ್ಲಿ ದೂತಾವಾಸ ಕಚೇರಿಯ ಅಧಿಕೃತ ಉದ್ಘಾಟನೆ ಇಂದು ನೆರವೇರಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ತಾತ್ಕಾಲಿಕ ರಾಯಭಾರಿ ಕಚೇರಿಯನ್ನು ಉದ್ಘಾಟಿಸಿದರು.
ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯ ಜೆ.ಡಬ್ಲ್ಯೂ.ಮಾರಿಯೆಟ್ ಹೋಟೆಲ್ ನಲ್ಲಿ ತಾತ್ಕಾಲಿಕ ದೂತಾವಾಸ ಕಚೇರಿ ತೆರೆಯಲಾಗಿದೆ. ಸದ್ಯದಲ್ಲಿಯೇ ನಗರದ ಆಯಕಟ್ಟಿನ ಭಾಗದಲ್ಲಿ ಶಾಶ್ವತ ಕಚೇರಿ ತೆರೆಯಲಾಗುವುದು. ಕಾಯಂ ಕಚೇರಿ ತೆರೆಯುವವರೆಗೆ ಖಾಸಗಿ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಪ್ರಸ್ತುತ, ಯುಎಸ್ ದೂತಾವಾಸಗಳು ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತವೆ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಬಲಪಡಿಸಲು ಬೆಂಗಳೂರಿನಲ್ಲಿ ಅಮೆರಿಕದ ದೂತಾವಾಸವನ್ನು ತೆರೆಯಲಾಯಿತು.