ವಾಹನ ಸವಾರರೇ ಗಮನಿಸಿ… KYC ಅಪೂರ್ಣ ಇದ್ದರೆ ಜ. 31 ರ ನಂತರ ಫಾಸ್ಟ್‌ ಟ್ಯಾಗ್‌ ನಿಷ್ಕ್ರಿಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

KYC  (Know Your Customer) ಅಪೂರ್ಣ ಇದ್ದರೆ ಫಾಸ್ಟ್‌ ಟ್ಯಾಗ್‌ ಗಳನ್ನು ಜನವರಿ 31 ರ ನಂತರ ಬ್ಯಾಂಕ್‌ ಗಳು ನಿಷ್ಕ್ರಿಯಗೊಳಿಸುತ್ತವೆ ಅಥವಾ ಕಪ್ಪುಪಟ್ಟಿಗೆ ಸೇರಿಸುತ್ತವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಸೋಮವಾರ ತಿಳಿಸಿದೆ.

ಬಳಕೆದಾರರು ತಮ್ಮ ಇತ್ತೀಚಿನ ಫಾಸ್ಟ್‌ ಟ್ಯಾಗ್‌ ನ KYC ಪೂರ್ಣಗೊಂಡಿದೆ ಎಂದು ಖಚಿತಪಡಿಸಿಕೊಳ್ಳಬೇಕು.ಟೋಲ್‌ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆಯನ್ನು ಸುಗಮಗೊಳಿಸಲು ಹಾಗೂ ತಡೆರಹಿತ ಸೇವೆ ಒದಗಿಸಲು NHAI, ‘One Vehicle-One FasTag’ ಎಂಬ ಪರಿಕಲ್ಪನೆಯನ್ನು ಜಾರಿಗೊಳಿಸಿದೆ. ಇದರಿಂದ ಹಲವು ವಾಹನಗಳಿಗೆ ಒಂದೇ FasTag ಹೊಂದುವುದು ಅಥವಾ ಒಂದೇ ವಾಹನಕ್ಕೆ ಹಲವು FasTag ಗಳನ್ನು ಹೊಂದುವುದನ್ನು ಇದು ತಪ್ಪಿಸುತ್ತದೆ.ಕೆವೈಸಿ ಪೂರ್ಣಗೊಳಿಸಿಕೊಂಡಿರುವುದನ್ನು ಗ್ರಾಹಕರು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೇ ಜನವರಿ 31ರೊಳಗೆ ಪೂರ್ಣಗೊಳಿಸಿಕೊಳ್ಳಬೇಕು ಎಂದು ಅದು ಹೇಳಿದೆ.

One Vehicle-One FasTag ಪ್ರಕಾರವೇ ಬಳಕೆದಾರರು ನಡೆದುಕೊಳ್ಳುವುದು ಅನಿವಾರ್ಯ. ಅವರು ತಮ್ಮ ಹಿಂದಿನ ಹಲವು ಫಾಸ್ಟ್ಯಾಗ್ಗಳನ್ನು ರದ್ದುಗೊಳಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ಪ್ರಸ್ತುತ ಇತ್ತೀಚಿನ ಫಾಸ್ಟ್‌ ಟ್ಯಾಗ್ ಖಾತೆ ಮಾತ್ರ ಸಕ್ರಿಯವಾಗಿರುತ್ತದೆ. ಈ ಕುರಿತು ಯಾವುದೇ ಗೊಂದಲಗಳಿದ್ದರೆ ಹೆಚ್ಚಿನ ವಿವರಗಳಿಗೆ ಫಾಸ್ಟ್‌ ಟ್ಯಾಗ್ ಬಳಕೆದಾರರು ಹತ್ತಿರದ ಟೋಲ್ ಪ್ಲಾಜಾಗಳು ಅಥವಾ ಆಯಾ ವಿತರಕ ಬ್ಯಾಂಕ್‌ಗಳ ಟೋಲ್-ಫ್ರೀ ಗ್ರಾಹಕ ಸೇವಾ ಸಂಖ್ಯೆಯನ್ನು ಸಂಪರ್ಕಿಸಬಹುದು NHAI ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!